KARTYOL
ಬಹುಶಃ ಈಗಾಗಲೇ ನಮ್ಮ ಪುಸ್ತಕಗಳು ಹಳದಿಯ Marlboro plastic ಲಕೋಟೆಗಳನ್ನು ನುಸುಳಿ ಆಗಿರುತ್ತಿತ್ತು. ಇದು ಲಕೋಟೆಯ ಒಳಗೆ ಪುಸ್ತಕವಿಟ್ಟು ನಂತರ ಚೀಲಕ್ಕೆ ತುಂಬಿಸುವ ಕಾಲ.ಹುಡುಗರು ಬೇಗನೆ ಸಿಕ್ಕ ಯಾವುದಾದರು ಬಣ್ಣದ ಎರಡು ಲಕೋಟೆಗಳನ್ನು ಸಂಗ್ರಹಿಸಿದರೆ ಹುಡುಗಿಯರಿಗೆ ತುಸು ವಿಳಂಬ ಏಕೆಂದರೆ ಲಕೋಟೆ Pink ಬಣ್ಣದಲ್ಲೂ ಲಭ್ಯವಿದೆ! ಆಗೇನೂ Waterproof School Bagಗಳು ಲಗ್ಗೆಯಿಟ್ಟಿರಲಿಲ್ಲ. ನಮ್ಮ ತಯಂದಿರು Branchಗೆ ಬೀಡಿ ಕೊಂಡುಹೋಗುತ್ತಿದ್ದದ್ದು ಇದೇ ಲಕೋಟೆಗಳಲ್ಲಿ. ಹದಿನೈದು ವರ್ಷಗಳ ಹಿಂದೆ ಪ್ರತಿ ಅಂಗಡಿಯಲ್ಲೂ ತೂಗುಹಾಕಿರುತ್ತಿದ್ದ ಇಂತಹ ಲಕೋಟೆಗಳು ಇಂದು ಊರಿನ ಒಂದಿ ಅಂಗಡಿಯಲ್ಲಿ ಸಿಗುವ ವಿಶೇಷ ಆಯುರ್ವೇದಿಕ್ ಧಾತುವಿನಂತೆ ಮಾರ್ಪಾಡಾಗಿದೆ. ಗಾರೆ ಕೆಲಸ ಮುಗಿಸಿ Bus ಹತ್ತುವವರ ಎಡ ಕಂಕುಳಲ್ಲಿ ಭದ್ರವಾಗಿರುತ್ತಿದ್ದ ಗಟ್ಟಿಮುಟ್ಟಾದ ಲಕೋಟೆ, ಇಂದು ಒಂದು ಸೇರು ಅಕ್ಕಿ ಹಾಕಿ ಹಿಡಿದುಕೊಂಡಾಗ Chewing Gumನಂತೆ ಅದರ ಹಿಡಿ ವಿಸ್ತರಿಸಿ ಹರಿದುಹೋಗುತ್ತಿದೆ. ಬೆಳಗ್ಗೆ ಎದ್ದು ಅಡುಗೆ ಮನೆಯ ಉರಿಯುತ್ತಿರುವ ಒಲೆಯ ಮುಂದೆ Tooth Brush ಹಿಡಿದು ಕೊಕ್ಕರೆ ಕುಳಿತುಕೊಳ್ಳುದು, ಅಮ್ಮ ತಂದಿಟ್ಟ ತೆಂಗಿನ ಗರಿಗಳನ್ನು ಅವರ ಕಣ್ಣು ತಪ್ಪಿಸಿ ಒಂದೊAದೇ ಸುಡುವುದು, ಗರಿಯ ತುದಿಗೆ ಬೆಂಕಿ ಹೊತ್ತಿಸಿ ಅದು ಆರುವಷ್ಟರಲ್ಲಿ ಕಿಟಕಿಯ ಬುಡದಲ್ಲಿ ಇಟ್ಟ ಸೀಮೆಯೆಣ್ಣೆ ದೀಪವನ್ನು ಉರಿಸುವ ಭಾರೀ ಸಾಹಸದ ಪ್ರಯತ್ನ, ಕೊಡದಲ್ಲಿ ಇಟ್...