Posts

FULL-STACK FOOTBALL FCs

Image
This was a random picture with instruction I received in ICIS Sports WhatsApp group on 27th January 2025. I hadn't known most of in this list. Some I can recall from attendance book. Same day around 9PM, I got a call by Prof. Abhishek Sports Co-ordinator of ICIS. He asked me to co-ordinate ICIS Football team in next day's tournament and he sent a contact of student named Mishal who was said to be the captain of ICIS Football team. That was also a first student contact I ever saved in my phone. No Idea about his appearance. I said Okay without second thought. Not because I intrested in Football nor I know the men I should co-ordinate.  Just travelling, even 'on-duty'! Break from daily routine, no calling attendance, no Shhh, no need to connect the projector.    I recalled that my father used to say that during his childhood in 1970s he and his siblings hardly sleep if they go bus journey next day! It is human idiosyncrasy to have imagination before any journey. Every jou...

TADIANDAMOL

Image
                      ಮಡಿಕೇರಿಯಲ್ಲಿ ಅನ್ಯ ಸಹಪಾಠಿಯಬ್ಬಳ ಸಹೋದರಿಯ ಮದುವೆ ಮುಗಿಸಿಕೊಂಡು ಅವಳನ್ನು ಆಕೆಯ ಮನೆಗೆ ತಲುಪಿಸಲು ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಇಕ್ಕಟ್ಟಿನ ದಾರಿ, ಕಾಫಿ ತೋಟಗಳನ್ನು ಸೀಳಿ ಗಗನಚುಂಬಿ ಸಿಲ್ವರ್ ಮರಗಳ ಮಧ್ಯೆ ಹಾದುಹೋಗಿತ್ತು. ಮಧ್ಯದಲ್ಲಿ  ಕಟಾವಾದ ಸಿಲ್ವರ್ ಮರಗಳನ್ನು ತುಂಬಿದ ಟ್ರಾಕ್ಟರ್, ಕೆಸರು ಮಣ್ಣಿನಲ್ಲಿ ಪರದಾಡುತ್ತಾ, ಇನ್ನೊಂದು  ಟ್ರಾಕ್ಟರ್‌ಗೆ ಕಟ್ಟಿ ಎಳೆಸಿಕೊಳ್ಳುತ್ತಿದ್ದ ದೃಶ್ಯ ನನಗೆ ಈಗಲೂ ನೆನಪಿದೆ. ಅವಳ ಮನೆ ತಲುಪಿ ಕಾಫಿ ಕುಡಿದ ನಂತರ ಹಿಂದಿನ ಅಂಗಳಕ್ಕೆ ಕರೆದು, ಅರೆ-ಬರೆ ಒದ್ದೆಯಾದ ಕಟ್ಟಿಗೆಯ ರಾಶಿಯ ನೇರ ಮೇಲಕ್ಕೆ ಕೈತೋರಿಸಿ ದೂರದ ಬೆಟ್ಟವನ್ನು ತೋರಿಸಿದಳು. ಮೋಡಗಳ ನಡುವೆ ಆ ಬೆಟ್ಟ ಮಬ್ಬಾಗಿ ಕಾಣುತ್ತಿದ್ದರಿಂದ ತಾರಸಿಗೆ ಹತ್ತಿ ಸುಧಾರಿಸಿದ ನೋಟಕ್ಕಾಗಿ ಪ್ರಯತ್ನಿಸಿದೆವು. ನೋಟ ಸುಧಾರಿಸದಿದ್ದರೂ, ತಾರಸಿ ಕಂಡೊಡನೆ ಮೇಲಿನಿಂದ ಕಾಣುವ ಕಾಫಿ ತೋಟದ ದೃಶ್ಯ, ಲಾಕ್ ಡೌನ್ ಸಮಯದಲ್ಲಿ ನಡೆದ ಕೆಲವು ಸ್ಪರ್ಧೆಗಳು ನೆನಪಿಗೆ ಬಂದವು. ಅವುಗಳಲ್ಲಿ ಒಂಟಿ ನೃತ್ಯವೂ ಒಂದು. ಸ್ಫರ್ಧೆ ಓನ್-ಲೈನ್ ಆಗಿದ್ದರಿಂದ ಕೆಲವು ಮನೆಗಳ ತಾರಸಿಯನ್ನು ನೋಡುವ ಭಾಗ್ಯ ನಮ್ಮದಾಗಿತ್ತು! ನಂತರ ಅಲ್ಲೇನೂ ನಮಗೆ ಸಮಯವಿರಲಿಲ್ಲ. ನಾವು ನಮ್ಮ ಊರಿನತ್ತ ಪ್ರಯಾಣ ಬೆಳೆಸಿದೆವು. ಮುಂದಿನ ಕೆಳದಿನಗಳಲ್ಲಿ ಅವಳ ತಾಯಿ,"ಮನೆ...

PERCEPTION

Image
                 It was 2011. I was in 6th standard in my native school. One of my neighbour boy who was 4 years younger than me said that he had went to watch the newly released movie 'Paramatma' with his elders. Even he said that that is the worst and boring movie he ever seen on big  screen. One day that movie was shown in well known Kannada channel Suvarna on a weekend. Still hearing that review from him, I waited and watched that movie on T.V. I had wondered and thought that why people are crazy about this 'dabba' movie! In a famous song "Usira Kacchi Kollale..." from that same movie, in a scene of race, a man had to carry his girl in his back and had to run towards the finishing ribbon. There while running, Deepa Sannidi bites Puneeth Rajkumar's shoulder hardly! In that age, I was totally puzzled why this, 'more-than-20years-old-horse!' exhibits such a childish behaviour. It took me a decade to realize that 'bite' as an act wh...

THE WAY WE TRAVEL

Image
                    ಪ್ರಯಾಣಿಸಲು BUS ಹತ್ತಿದೊಡನೆ BAGನಿಂದ MOBILE ಮತ್ತು EARPHONE ತೆಗೆಯುವುದು ಒಂದು ಸಾಮಾನ್ಯ ಅಭ್ಯಾಸ.  ಹಿಂದೆ ಪ್ರಯಾಣಿಸಿದ ದಾರಿಯಲ್ಲೇ ಪ್ರಯಾಣಿಸುವಾಗ, ಅದೇ ಪ್ರಯಾಣಿಕರು, ಅದೇ ನಿಲ್ದಾಣ, ಅದೇ ತಿರುವು. ಏನಾದರು ಹೊಸತನವಿರಲೆಂದು ಪದ್ಯ ಕೇಳುವ ಅಭ್ಯಾಸ. BUSನಲ್ಲಿ SEATಸಿಗದಿದ್ದರೆ ಆ ಭಾಗ್ಯವೇ ಇಲ್ಲ. ಪದ್ಯದ ಸಾಲುಗಳನ್ನು SHUFFLE ಮಾಡಿ ಕೇಳುವವರು ಕೆಲವರಾದರೆ, ಇನ್ನೂ ಕೆಲವರು ತಮ್ಮ ಇಷ್ಟದ ಹಾಡನಿಂದ ಪ್ರಾರಂಭಿಸುವವರು. ಕಿವಿಗೆ EARPHONE ಸಿಕ್ಕಿಸಿ ಕಿಟಕಿಗೆ ತಲೆಯೊರಗಿಸಿ ಅದೇ ನೇರದಿಂದ ದಾರಿ ನೋಡುತ್ತಾ, ಓರೆ ಕಣ್ಣಿನಿಂದ ಬಸ್ ಹತ್ತಿದವರನ್ನು ನೋಡುತ್ತಾ ಪ್ರಯಾಣ ಮುಂದುವರೆಯುತ್ತದೆ. ಕೆಲವೊಮ್ಮೆ ಸನ್ನಿವೇಷಕ್ಕೆ ತಕ್ಕ ಹಾಡು ಬರದಿದ್ದಾಗ, ಹಾಡು ಬದಲಿಸಿ ಮತ್ತೆ ಕಣ್ಣುಮುಚ್ಚಿ ಆಲಿಸುವುದು. ಬಿರು ಬಿಸಿಲಿನ ಬೇಸಿಗೆಯಲ್ಲಿ ಒಣಗಿಹೋದ ಪರಿಸರವನ್ನು ಆನಂದಿಸಲೊಲ್ಲದ ನಾವು, ಮಳೆ ಬಿದ್ದು ಹಚ್ಚಹಸುರಾದ ಅದೇ ದಾರಿಯನ್ನು ಆಲಂಗಿಸುತ್ತೇವೆ. ಅದಕ್ಕಾಗಿಯೇ ನಾವು ಒಂದು ಊರು ಯಾ ದಾರಿಯ ಸೌಂದರ್ಯವನ್ನು ಅಳೆಯುವಾಗ ಬೇಸಿಗೆಯಲ್ಲಿ ಅಳೆಯದೆ, ಅದು ಮುಂಗಾರಿನ ಮಳೆಯಿಂದ ಶೃಂಗಾರಗೊ0ಡಮೇಲೆ ಅಳೆಯುವುದು ಉತ್ತಮ. ದೃಶ್ಯಗಳು ಚೆನ್ನಾಗಿದೆಯೆಂದು ಒಂದತ್ತು ಕೀಮಿ ದೂರವಾದರೂ ಪರವಾಗಿಲ್ಲವೆಂದು ಸುಂದರ ದಾರಿಯನ್ನು ಆರಿಸುತ್ತೇವೆ. ದೂರದ ಊರಿಗಿಂತ...

Dandeli Days

Image
ಕುಮಾರಪರ್ವತ ಚಾರಣದಂದು ಭಟ್ರಮನೆಯ TENTನಲ್ಲಿ ಮಲಗುವಾಗ ನನ್ನ ಮೊದಲ TENT STAY ನೆನಪಾಯಿತು. ಅಂದು 09/12/2021ರ ರಾತ್ರಿ, ಕಾಲೇಜಿನ ಅಂಗಳದಲ್ಲಿ ಗಂಟು ಮೂಟೆಗಳೊಂದಿಗೆ ಕಾಯುತ್ತಾ ಕುಳಿತಿದ್ದಾಗ ನಾವು ಕಾಯುತ್ತಿದ್ದ ಬಸ್ ಬಂದೇ ಬಿಟ್ಟಿತ್ತು. ನಮ್ಮ ಕಾಲೇಜಿನ ಎದುರಿನ ರಸ್ತೆಯಲ್ಲಿ ನಿಂತಿದ್ದ ಬಸ್ ನ ಎದುರು ನಿಂತು ಎಲ್ಲರೊಡಗೂಡಿ ಪ್ರಾರ್ಥಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಶ್ರವಣ್ ಆಳ್ವ ಸಾಂಕೇತಿಕ ಚಾಲನೆ ನೀಡಿದ. ಎಲ್ಲಾ ಯಾತ್ರೆಗಳಲ್ಲಿ ಇರುವಂತೆ ತಮಗೆ ಬೇಕಾದ ಸೀಟ್ ಗಿಟ್ಟಿಸಿಕೊಳ್ಳಲು ಇಲ್ಲಿಯೂ ಬಸ್ ಹತ್ತಲು ತುಸು ಅವಸರ. ಕಾಲೇಜಿನಿಂದ ಹೊರಟು, ಶಿರೂರು TOLL GATE ವರೆಗೆ ಕುಣಿದು, ದಣಿದು ನಿದ್ರೆಗೆ ಜಾರಿದ ನಮಗೆ ಎಚ್ಚರವಾದದ್ದು ಮರುದಿನ ಎಲ್ಲೋ, ಅಮ್ಚಿನಡ್ಕ  ಮತ್ತು ಸುಳ್ಯದ  ಮಧ್ಯೆ ಇರುವಂತಿರುವ  ರಸ್ತೆಯ ಬದಿ ಬಸ್ ನಿಲ್ಲಿಸಿದಾಗಲೇ. ಹಳ್ಳಿಯೊಂದನ್ನು ತಲುಪಿ ಹೋಟೆಲೊಂದರಲ್ಲಿ ಹಲ್ಲುಜ್ಜಿ ಉಪಹಾರ ಸೇವಿಸಿದೆವು. ಕಾಡಿನ ನಡುವೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ, ಗಗನಚುಂಬಿ ಮರಗಳ ಕೆಳಗೆ ಬಸ್ ನಿಲ್ಲಿಸಲಾಯಿತು. ಬಸ್ ನಿಂದ ಇಳಿದೊಡನೆ ಉತ್ಸುಕರಾಗಿದ್ದೆವು. ನೀರಿನ ಮೋಜಿಗೆ ಸರಿಹೊಂದುವ ಉಡುಪಿನ ಮೇಲೆ LIFE JACKET ಮತ್ತು HELMET ಧರಿಸಿ ನದಿಯ ದಡಕ್ಕೆ ಬಂದು ನಿಂತೆವು. ನಮ್ಮ ದೊಡ್ಡ ಗುಂಪು ವಿವಿಧ ಆಟಗಳಲ್ಲಿ ಚದುರಿಹೋಯಿತು. Kayaking <photo> Zorbing <photo> Rafting Jacuzzi Bath...