Dandeli Days
ಕುಮಾರಪರ್ವತ ಚಾರಣದಂದು ಭಟ್ರಮನೆಯ TENTನಲ್ಲಿ ಮಲಗುವಾಗ ನನ್ನ ಮೊದಲ TENT STAY ನೆನಪಾಯಿತು. ಅಂದು 09/12/2021ರ ರಾತ್ರಿ, ಕಾಲೇಜಿನ ಅಂಗಳದಲ್ಲಿ ಗಂಟು ಮೂಟೆಗಳೊಂದಿಗೆ ಕಾಯುತ್ತಾ ಕುಳಿತಿದ್ದಾಗ ನಾವು ಕಾಯುತ್ತಿದ್ದ ಬಸ್ ಬಂದೇ ಬಿಟ್ಟಿತ್ತು. ನಮ್ಮ ಕಾಲೇಜಿನ ಎದುರಿನ ರಸ್ತೆಯಲ್ಲಿ ನಿಂತಿದ್ದ ಬಸ್ ನ ಎದುರು ನಿಂತು ಎಲ್ಲರೊಡಗೂಡಿ ಪ್ರಾರ್ಥಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಶ್ರವಣ್ ಆಳ್ವ ಸಾಂಕೇತಿಕ ಚಾಲನೆ ನೀಡಿದ. ಎಲ್ಲಾ ಯಾತ್ರೆಗಳಲ್ಲಿ ಇರುವಂತೆ ತಮಗೆ ಬೇಕಾದ ಸೀಟ್ ಗಿಟ್ಟಿಸಿಕೊಳ್ಳಲು ಇಲ್ಲಿಯೂ ಬಸ್ ಹತ್ತಲು ತುಸು ಅವಸರ. ಕಾಲೇಜಿನಿಂದ ಹೊರಟು, ಶಿರೂರು TOLL GATE ವರೆಗೆ ಕುಣಿದು, ದಣಿದು ನಿದ್ರೆಗೆ ಜಾರಿದ ನಮಗೆ ಎಚ್ಚರವಾದದ್ದು ಮರುದಿನ ಎಲ್ಲೋ, ಅಮ್ಚಿನಡ್ಕ ಮತ್ತು ಸುಳ್ಯದ ಮಧ್ಯೆ ಇರುವಂತಿರುವ ರಸ್ತೆಯ ಬದಿ ಬಸ್ ನಿಲ್ಲಿಸಿದಾಗಲೇ. ಹಳ್ಳಿಯೊಂದನ್ನು ತಲುಪಿ ಹೋಟೆಲೊಂದರಲ್ಲಿ ಹಲ್ಲುಜ್ಜಿ ಉಪಹಾರ ಸೇವಿಸಿದೆವು. ಕಾಡಿನ ನಡುವೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ, ಗಗನಚುಂಬಿ ಮರಗಳ ಕೆಳಗೆ ಬಸ್ ನಿಲ್ಲಿಸಲಾಯಿತು. ಬಸ್ ನಿಂದ ಇಳಿದೊಡನೆ ಉತ್ಸುಕರಾಗಿದ್ದೆವು. ನೀರಿನ ಮೋಜಿಗೆ ಸರಿಹೊಂದುವ ಉಡುಪಿನ ಮೇಲೆ LIFE JACKET ಮತ್ತು HELMET ಧರಿಸಿ ನದಿಯ ದಡಕ್ಕೆ ಬಂದು ನಿಂತೆವು. ನಮ್ಮ ದೊಡ್ಡ ಗುಂಪು ವಿವಿಧ ಆಟಗಳಲ್ಲಿ ಚದುರಿಹೋಯಿತು. Kayaking <photo> Zorbing <photo> Rafting Jacuzzi Bath...