Posts

ಊರೆಲ್ಲಾ ಅವನದ್ದೇ ಸುದ್ದಿ

Image
                 ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು.  ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ.             ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರ...

last scene 03/05/2017

Image
               ಒಂದು ಡೈರಿ ಕಾಣೆಯಾಗಿತ್ತು. ಅಡಿಕೆ ಒಣಗಿಸಲು ಹಾಕಿದ Solar Tarpaulin ನ ಒಳಗೆ ಬಿದ್ದಿದ್ದ ಗೋಣಿ ಚೀಲದಲ್ಲಿ ಹುಡುಕುತ್ತಿದ್ದೆ. Solar Tarpaulin ಅಡಿಕೆ  ಒಣಗಿಸಲು ಇರುವ ವ್ಯವಸ್ಥೆಯಲ್ಲದೆ ಹಲವು ಉಪಯೋಗಗಳನ್ನು ಹೊಂದಿದೆ. ಅವುಗಳಲ್ಲಿ  ತಾತ್ಕಾಲಿಕ ಗುಜರಿ ಶೇಖರಣೆಯೂ ಒಂದು. ಹಾಗೆ ಸುಫಲದ ಗೋಣಿಯಲ್ಲಿ ಹುಡುಕುತ್ತಿದ್ದಾಗ ಪಿ.ಯು.ಸಿ ಯ ದಿನಗಳು ನೆನಪಿಗೆ ಬಂದವು. ಗೋಣಿಯನ್ನು ಅಡ್ಡ ಹಾಕಿದವನೇ C.E.T Question Paperನ್ನು ಹಿಡಿದು ನಿಂತೆ. ದಿನಾಂಕ 03/05/2015 ಎಂದು ನಮೂದಿಸಿತ್ತು. ಅದೇ ದಿನ ನಾನು  ಅವಳನ್ನು ಕೊನೇಯ ಬಾರಿ ಕಂಡದ್ದು.               PUC Exam Centre ಅದಲುಬದಲಾದ ವರ್ಷವದು. ನಮಗೆ ಕೊಂಬೆಟ್ಟು. CCTV Cam3ra ಇಲ್ಲವೆಂದು 'ಕೆಲವರಿಗೆ' ಖುಷಿ ಬೇರೆ. ನಾವು ಮಾತ್ರ ಅಲ್ಲ,  ಅಂಬಿಕದವರೂ ಇದ್ದಾರಂತೆ!!! ಅದೇ 'ಕೆಲವರಿಗೆ' ಮತ್ತಷ್ಟು ಖುಷಿ. ಆದರೆ Bus Stand ನಿಂದ 1km ನಡಿಗೆಯಿದೆ. ತ್ರಿವರ್ಣವನ್ನು ಹೊದ್ದಿರುವ ಕಂಬಗಳನ್ನು ನೋಡಿದಾಗ ಬಾಲ್ಯದ ಪ್ರಾಥಮಿಕ  ನೆನಪಾಗುತ್ತದೆ. ನಾನು ಅವಳನ್ನು ಮೊದಲು ಕಂಡದ್ದು 28/03/2017ರ Electronics Examನಂದು. Exam ಬರೆಯುವವರಲ್ಲಿ ಒಬ್ಬಳಾಗಿದ್ದ ಹುಡುಗಿ ಬರಬರುತ್ತಾ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಳು. ಮುಂದಲೆಯಲ್ಲಿ ಕುಂಕುಮ...

Kolikamale ; The Unknown peak

Image
ಇದು ಮೂರನೆಯದಾಗಿ ಬಂದ ಹೆಸರು, ಮೊದಲು ಗಡಾಯಿಕಲ್ಲು, ನಂತರ ಕಾಸರಗೋಡಿನ ರಾಣಿಪುರಂ ಪ್ರಸ್ತಾಪವಾಗಿತ್ತು. ಜಾಗ ಯಾವುದಾದರೇನು ಮಜಾ ಮಾಡೋದರಲ್ಲಿರೋದು. ಮೂರು ಜಾಗಗಳು ಚಾರಣದ ಸ್ಥಳಗಳೇ.ಮೂರನೆಯದ್ದು ಹೊರ ಜಗತ್ತಿಗೆ ಅಷ್ಟು ತೆರೆದುಕೊಂಡಿಲ್ಲ. ಆ ಊರಿನವರಿಗೆ ಮಾತ್ರವೇ ಅದರ ಜ್ಞಾನ. ಅದಿರೋದು ನನ್ನ Friend ಮೋಕ್ಷಿತ್‌ನ ಊರಿನಲ್ಲಿ.OK,  ಜಾಗ ಪಕ್ಕಾ ಆಯ್ತು. ಯೋಜನೆಗಳು ರೂಪಿತಗೊಂಡಿದ್ದು ಮೂರು ದಿನದ ವಜ್ರಮಹೋತ್ಸವದ ಹಿಂದಿನ ದಿನ, ಏಳು ಜನರ ಪಟ್ಟಿ ಸಿದ್ಧವಾಯಿತು. ಸಂಜೆ ಪರೋಟಕ್ಕೆ ಆರ್ಡರ್ ಕೂಡ ಆಯಿತು. ಬೆಳಗ್ಗೆ ನಾನು ಮತ್ತು ಪ್ರಸಾದ Mahindra  Duro ದಲ್ಲಿ ಸುಳ್ಯ ದತ್ತ ಹೊರಟೆವು. ಸುಳ್ಯ ತಲುಪಿದ ನಾವು Duro ಅನ್ನು Bus Standನ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಅವಿನಾಶ್‌ಗೆ ಕರೆ ಮಾಡಿದಾಗ, ಸಾಯಿನಾಥ್ ಆಗಲೇ ಸುಳ್ಯಕ್ಕೆ ತಲುಪಿದ್ದು, ನಮಗಾಗಿ  Bus Standನಲ್ಲಿ ಕಾಯುತ್ತಿದ್ದಾನೆಂದು ತಿಳಿಯಿತು. ನಂತರ Bus Standನಲ್ಲಿ ಸಾಯಿನಾಥ್‌ನನ್ನು ಸಂಧಿಸಿ, ಮೂರು ಜೋಡಿ ಕುರ್ಚಿಗಳಿರುವೆಡೆಗೆ ಹೆಜ್ಜೆಹಾಕಿ ಆಸೀನರಾದೆವು. ನಂತರದ 30 ನಿಮಿಷಗಳಲ್ಲಿ ಅವಿನಾಶ್ ಬಂದ, ಕೆಲವು ನಿಮಿಷಗಳ ನಂತರ ಮೋಕ್ಷಿತ್ ತಾನು ಜೀಪಿನಲ್ಲಿ ಬಂದಿರುವುದಾಗಿ ತಿಳಿಸಿದ. ಮೋಕ್ಷಿತ್‌ನ ಜೀಪು ಹತ್ತಿದ ನಾವು ಪರಗೇಟ್ ನಲ್ಲಿರುವ ಅವರ ಬಾಡಿಗೆ ಮನೆಯಿಂದ ನೀರಿನ ಬಾಟಲಿಗಳನ್ನು ಸಿದ್ಧಪಡಿಸಿದಾಗ ಅಲ್ಲಿಗೆ ಪ್ರಜ್ವಲ್ ಮತ್ತು ಅಭಿಷೇಕ್ ಬೈಕ್‌ನಲ್...

Trail of an Elephant

Image
                 'ನಿಡ್ಯಮಲೆಕ್ಕ್ Group ಮಾನ್ಪ್ಯರ ಇಜ್ಜಾ?' ಎಂದು ಕೇಳಿದಾಗ 'ದುಂಬುತವೇ ಉಂಡತ' ಎಂದು ಅವಿನಾಶ್ Screenshot ಕಳುಹಿಸಿದ. ನನ್ನ Number Delete ಮಾಡಿದ್ದರಿಂದಾಗಿ ನನ್ನಿಂದ ಕೈ ತಪ್ಪಿ ಹೋಗಿತ್ತು. Join ಆಗಿ ನೋಡಿದಾಗ 24 May 2019 ಆನ್ನೋ Label! Trip ಅಂದ್ರೆ ಹಾಗೇನೆ, ಅದಕ್ಕೆ ದಿನ ಬರೋದೇ ಇಲ್ಲ. ಎಲ್ಲರಿಗೂ ಪುರುಸೊತ್ತೇ ಇರೋದಿಲ್ಲ. ಒಬ್ಬರಿಗೆ ಮದುವೆ ಇದ್ದರೆ, ನಂತರದ ದಿನ ಇನ್ನೊಬ್ಬನಿಗೆ ಸಾವು. ಇನ್ನೊಂದು ದಿನ ಇನ್ನೊಬ್ಬರಿಗೆ ನೇಮ.               ಅಂತು January 19, 2020ರಂದು ನಮಗೊಂದು ಮುಹೂರ್ತ ಬಂತು. ಎಲ್ಲರೂ ಬೆಳಗ್ಗೆ Bikeನಲ್ಲಿ ಬಂದು ಮೋಕ್ಷಿತ್ ನ ಸುಳ್ಯದ ಬಾಡಿಗೆ ಮನೆಯಲ್ಲಿ ಜಮಾವಣೆಗೊಂಡೆವು. ಬರುವವರನ್ನು ಕಾದು, ಎಲ್ಲರೊಡಗೂಡಿ ಪೆರಾಜೆಯತ್ತ ಮುಖಮಾಡಿದೆವು. 6 km ದೂರದ ಪೆರಾಜೆಯಿಂದ ಇನ್ನೂ 9km ಅಂಡಿಗುಂಡಿ Road, ತಾರಮರ ತಿರ್ಗಸ್, ಯಮನಗುಂಡಿಯಂತಿರುವ ರಸ್ತೆ ಬದಿಗಳು. ಇವೆಲ್ಲವನ್ನು ಸೀಳಿ ಮೋಕ್ಷಿತ್ ನ ಇಲ್ಲ್ ತ ನೆರಳಿನಲ್ಲಿ Bike ನಿಲ್ಲಿಸಿದಾಗ ಅವನ 'Daddy' ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಕುರ್ಸಿನಲ್ಲಿ ಕೂತೊಡನೆ Order ತೆಗೆದುಕೊಂಡು ಚಹಾ ಮತ್ತು, ನಾನು ಚಹಾ ಕುಡಿಯುವುದಿಲ್ಲವಾದುದರಿಂದ ಹಾಲು ಬಂತು. ನಂತರ ನಮ್ಮ ಪಯಣ Jeep ನಲ್ಲಿ ಮೋಕ್ಷಿತ್ ನ Daddyಯ ಜೊತೆ ನಿಡ್ಯಮಲ...

Army ; The attachment

Image
            Near Virtual Firing Hall   ಅಂದು 08/12/2019 ಬೆಳಗ್ಗಿನ ಐದುವರೆ ಗಂಟೆಗೆ ಮಡಿಕೇರಿ ಬಸ್ ಹತ್ತಿದ ನಾವು ತಲುಪಿದ್ದು 07:15ಕ್ಕೆ, ಇನ್ನೂ ಯಾರೂ Cadet ಗಳು ಬಂದಿರಲಿಲ್ಲ. ಹೊಟ್ಟೆಗೆ ಕೊಂಚ ಹಸಿವು, ಏನಾದರೂ ತಿನ್ನೋಣವೆಂದರೆ Laguage ಕಾಯೋದು ಯಾರು? ಭಾರ ಅಷ್ಟೇನಿಲ್ಲವಾದರೂ ಗೋಧಿ ಬೂಸದ ಚೀಲದಂತೆ ಕಾಣುವ Languageಗಳನ್ನು Hotelನೊಳಗೆ ತೆಗೆದುಕೊಂಡು ಹೋಗುವುದಾ? ಇದಕ್ಕೆಲ್ಲಾ ನಿಮೂರ್ತಿ ಆದದ್ದು ಮಡಿಕೇರಿಯ Cadetಗಳು ಬಂದ ನಂತರವೇ. Laguageನ್ನು ಅವರ ಬಳಿ ಕಾಯಲು ಇರಿಸಿ ಬಸ್ ನಿಲ್ದಾಣದ ಸರ್ತಕ್ಕೆ ಇರುವ ಎರಡೇ ಎರಡು ಮೇಜಿನ ತರೆದ ಹೋಟೇಲಿನಲ್ಲಿ ಹೋಗಿ ಕುಳಿತೆವು. "ಇಡ್ಲಿ ವಡೆ , ಪಲಾವ್" ಎಂದಾಗ "ಎರಡೆರಡು ವಡೆ ಕೊಡಿ ಸಾಕು" ಎಂದು ಎರಡು ವಡೆ ಕಾಲಿಯಾದಾಗಲೂ ಹಸಿವು ಕಮ್ಮಿ ಆಗಲಿಲ್ಲ. ಇನ್ನೆರಡು ವಡೆಗಳ ಜೊತೆಗೆ ಹುಡುಗಿಯರ ಕಿರುಬೆರಳಿನಲ್ಲಿ ಬಿಟ್ಟ ಉಗುರಿನಷ್ಟು ದೊಡ್ಡ ಲೋಟದಲ್ಲಿ ಒಂದು ಕಾಫಿ ಕುಡಿದೆವು. ಹಸಿವೇನೂ ಮಾಯವಾಯಿತು ಆದರೆ ಅಮ್ಮನ ಮಾತು ನೆನಪಿಸಿಕೊಂಡಾಗ ಆತಂಕ " ನನ ಬಡಾಪುಂಡುಂದಂತ್ ತಿಕ್ಕ್ ನೆನ್ ಮಾಂತ ತಿನೊರ್ಚಿ ಮರೆ ಆ ಘಟ್ಟಟ್ !".               ಎಲ್ಲರೊಡಗೂಡಿ ಮೈಸೂರು ಬಸ್ ಹತ್ತಿದೆವು.ಕುಶಾಲನಗರದಲ್ಲಿ ನಮಗಾಗಿ ಕಾಯುತ್ತಿದ್ದವರ ಜೊತೆಯಲ್ಲಿ 12:00ರ ಹೊತ್ತಿಗೆ ಮೈಸೂರು ರೈಲ್ವೇ ನಿಲ್ದಾಣ ತಲುಪಿದೆವ...

Friendship; Behind the scene

Image
                     College ಜೀವನದಲ್ಲಿ ಪ್ರತಿ ಹಂತದಲ್ಲೂ ನೂರಾರು ಗಳೆಯರನ್ನು ಸಂಪಾದಿಸುತ್ತೇವೆ. ನಮ್ಮ ತರಗತಿಯಲ್ಲಿರುವ  ಎಲ್ಲರೂ ನಮ್ಮ ಗೆಳೆಯರೇ, ಇವರೆಲ್ಲಾ ಒಂದಲ್ಲಾ ಒಂದು ಸಂದರ್ಭದಲ್ಲಿ ಸಹಾಯ ಮಾಡಿರುತ್ತಾರೆ. ಆದರೆ ನಾವು ಇವರಲ್ಲಿ ಒಬ್ಬನನ್ನು Best Friend ಎಂದು ಆಯ್ಕೆಮಾಡಿರಬಹುದು. ಎನ್ನ ಗಿಟ್ಟಡ್ ಕುಲ್ಲ್ ಪೆ, Course start ಆದಾಗಿನಿಂದ ಒಟ್ಟಿಗಿತ್ತೆ, ನಮ್ಮ Love/Crush ವಿಷಯ ಪರಸ್ಪರ ಹಂಚಿಕೊಳ್ಳುತ್ತೇವೆ, ಇಬ್ಬರೂ Wash Roomಗೆ ಒಟ್ಟಿಗೆ ಹೋಗುತ್ತೇವೆ ಮತ್ತು ಇನ್ನಿತರ ಕಾರಣಗಳಿಂದ ಈ Best Friend ಅನ್ನುವ ಪಾತ್ರ ಹುಟ್ಟಿಕೊಳ್ಳಬಹುದು. ಆದರೆ ನಾವು ಪ್ರತಿದಿನವೂ ಪ್ರತ್ಯೇಕ ಗೆಳೆಯರಿಂದ ಸಹಾಯ ಪಡೆದದ್ದನ್ನು ಮರಪ್ಪೊಲ್ಯಾ? • ತಲೆ ಬಾಚಲು ಬಾರ್ಪನೆ ಕೊಟ್ಟವನು. • Class Hourನಲ್ಲಿ ಮಲಗುವ ನಿಮ್ಮನ್ನು Lecture ನೋಡಿದಾಗ ಕುಟ್ಟಿ ಎಬ್ಬಿಸಿದವನು. • Pant ಹರಿದಾಗ ಸೂಜಿ-ನೂಲು ಕೊಟ್ಟವನು. • ನೀವು absent ಆದ ದಿನ ನಿಮ್ಮ ಸ್ವರದಲ್ಲಿ "present mam” ಹೇಳಿ Attendance shortage manage ಮಾಡಿದವನು. • Exam ನ ಹಿಂದಿನ ದಿನ ನಿಮಗೆ Whatsapp ನಲ್ಲಿ Urgent ಆಗಿ notes photo ಕಳುಹಿಸಿಕೊಟ್ಟವನು. ನಿಮ್ಮ Crushನ Contact, insta_id ಪತ್ತೆ ಹಚ್ಚಿದವನು. • ನಿಮ್ಮ Lab Assignment ಆಗದಿದ್ದಾಗ ತನ್ನ prin...

Mangu and Affair

        ಅವತ್ತು ನಾನು ಬಿದ್ದ ಅಡಿಕೆ ಸುಲಿಯಿತ್ತಾ ಇದ್ದೆ. ಹಟ್ಟಿಯ ಕೆಲಸಕ್ಕಾಗಿ ತಯಾರು ಮಾಡಿ ಇರಿಸಿದ ಪಕ್ಕಾಸಿನ ಕೆಳಗಿನಿಂದ ಬೆಕ್ಕಿನ ಮರಿಯ ಕೂಗು ಕೇಳಿಸಿತು. ಕತ್ತಿಗೆ ಒಂದು ಅಡಿಕೆ ಸಿಕ್ಕಿಸಿ ಪರಿಶೀಲಿಸಿದಾಗ ಒಂದು ಹೆಣ್ಣು ಬೆಕ್ಕಿನ ಮರಿ, ನನ್ನನ್ನು ಕಂಡೊಡನೆ ಭಯಗೊಂಡು ಅಡಗಲು ಹವಣಿಸಿತು. ಅಮ್ಮನಿಗೆ ತಿಳಿಸಿದಾಗ, ತೋಟದಿಂದ ಹಿಂತಿರುಗಿ ಬರುವಾಗ ಅವರೊಡನೆ ಬಂತೆಂದು ಹೇಳಿದರು. ನಮ್ಮ ಮನೆಯಲ್ಲಿ ಬೆಕ್ಕಿನ ಸಾಕಣಿಕೆ ಇಲ್ಲದೆ ದಶಕವೇ ಕಳೆದಿದೆ. ಒಂದು ಕಪ್ಪು-ಬಿಳಿ ಮಂಗಲ ಹಿಂದೊಮ್ಮೆ ಇತ್ತು. ಯಾವಾಗ ಅದು ಚಿಕ್ಕಪ್ಪನ ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿತೋ ಅದೇ ಕೊನೆ. ಬಿದ್ದ ಪೆಟ್ಟಿಗೆ ಇಂಚಿ ತರೆ ಪಾಡ್ತ್ ಕೂಡಾ ಮಲಗಲಿಲ್ಲ.         ಇದರ ಬಣ್ಣ ಬಿಳಿಯ ಮೇಲೆ ಅರಶಿನ ಚೇಪಿದಂತೆ. ದಿನೇ ದಿನೇ ಬೆಕ್ಕಿಗೆ ನಮ್ಮ ವಾತಾವರಣ ಪರಿಚಯವಾಗತೊಡಗಿತು. ಎಲ್ಲರಿಗೂ ಅಚ್ಚು-ಮಚ್ಚು, ಸಮಯ ಕಳೆಯಲು, ದುಃಖ ಮರೆಯಲು ಬೆಕ್ಕು ಒಂದು ಅದ್ಭುತ ಜೀವಿ, ಮನೆಯುದ್ದಕ್ಕೂ ಓಡಾಡಿಕೊಂಡು, ಗೋಡೆಯ ಮೇಲಿನ ಹಲ್ಲಿಗಳನ್ನು ಹಿಡಿಯುತ್ತಾ ಎಂಕ್ಲೆಗ್ ಭಾರೀ ಉಪಕಾರ ಮಾಡುತ್ತಿತ್ತು.            ಇದರಿಂದ ಅಷ್ಟೇ ಉಪದ್ರವೂ ಇದೆ. ನನ್ನ ಪೊಪ್ಪನ ಸಮ್ಮಲೆ ಕಿದೂರು ಕಿಞ್ಞಣ ಅಳ್ಳರು ಹೇಳಿದ ಕಥೆ ನೆನಪಿಗೆ ಬರುತ್ತದೆ. ಅವರ ಪರಿಚಯದ ಭಟ್ಟರ ಮನೆಯ ಅಟ್ಟದ ಮೇಲೆ ಬೆಕ್ಕು ಮರಿಯಿಟ್ಟಿತ್ತು. ...