Posts

Monsoon Treasure

Image
             I  have been in a crawling position as my daily exercise routine. A neighbour getting closer to the doorstep by calling my pet name. He have the peculiar practice of calling someone gravely and fooling them by just asking “how are you?”. Obvivously, he may ) end up as Agasa’s Kannada moral story. I did not reply. Because, I do not rely on him anymore! Then he approached my mother while she milking the cow in the cowshed. When I wind up my exercise, mother told me to pursue him to get Mushrooms! I backed him to a cashew plantation.  He plucked remaining tiny mushrooms so that someone would have plucked earlier in surfeit. Blooming of Mushroom every year at a same place raised many eyebrows in my neighbourhood. What geological qualities influences the Mushroom to born? Do Mushrooms bear by thunder? Or do people presume so despite of its bloom in the thundering monsoon? Myth or Mind Do Mushrooms shrink if it is seen by humans ...

Those Days of Birth Days

Image
         ಈ ದಿನ ಏನೋ ವಿಶೇಷವಾಗಿದೆ. ಶಾಲಾ Prayer Assemblyಯಲ್ಲಿ ಎಲ್ಲರೂ ನಿಮ್ಮನ್ನೇ  ನೋಡುತ್ತಿದ್ದಾರೆ. ನಿಮ್ಮ ಧರಿಸು ಎಂದಿನಿಂದ ವರ್ಣಮಯವಾಗಿದೆ. ಪ್ರತಿದಿನವೂ ನೀಲಿ ಚಡ್ಡಿಯಲ್ಲಿರುತ್ತಿದ್ದ ನೀವು ಅಂದು ಅದ್ಯಾವುದೋ ಹೆಚ್ಚು ಜೇಬುಗಳಿರುವ Pants ತೊಟ್ಟಿದ್ದೀರಿ.  ತರಗತಿಯಲ್ಲಿಟ್ಟ Bagನಲ್ಲಿ ಅಪ್ಪ ಬರುವಾಗ ಪೇಟೆಯಿಂದ ತೆಗೆದುಕೊಟ್ಟ Chocolate Packet. ನಿಮ್ಮ ಸುತ್ತಲೂ ಗೆಳೆಯರು ನಿಂತುಕೊಂಡಿದ್ದಾರೆ. ನೀವು ಒಂದಾದರೂ ಹೆಚ್ಚು Chocolate ಕೊಡಬಹುದೆಂದು. ನಿಮ್ಮ Pantsನಲ್ಲಿ ಕಳ್ಳ ಕಿಸೆಯಿದೆ ಎಂದು ಗೆಳೆಯರಿಗೆ ತೋರಿಸಿ ಬೀಗುತ್ತಿದ್ದೀರಿ. ಬಾಲ್ಯ ಅಂದರೆ ಹಾಗೇನೇ, ಅಮ್ಮನ ಜೊತೆ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಸಲು ಹೋದಾಗ ಬಣ್ಣ ಯಾವುದೇ ಇರಲಿ, ಮೌಲ್ಯ ಯಾವುದೇ ಇರಲಿ Pantsನಲ್ಲಿ ನಮ್ಮ ಆಯ್ಕೆ ಯಾವಾಗಲೂ ಹೆಚ್ಚು ಜೇಬಿನದ್ದಾಗಿರುತ್ತದೆ. ಸೊಂಟಕ್ಕೆ $ Symbolನ ತಿರುಗಣಿಯ Belt.  ನಂತರದ ದಿನಗಳಲ್ಲಿ Chain Pants, PONDS Powder ಹಚ್ಚಿ ಶಾಲೆಗೆ ಬರುತ್ತಿದ್ದೆವು. ಹುಡುಗಿಯರು ಅಂದ್ರೆ ಅಲರ್ಜಿ. ನಮ್ಮನ್ನು ಯಾರಾದರು ಹುಡುಗಿಯರ ಬೆಂಚ್ ಗೆ ದೂಡಿಹಾಕಿದರೆ ನಮ್ಮ  ಪುರುಷತ್ವವೇ ನಾಶವಾದಂತೆಯೇ ಸರಿ. ಪುಸ್ತಕಗಳಿಗೆ ಖಾಕಿ Bindನ ಮೇಲೆ WWE Label, ಹೂವಿನ  Label ಅಂಟಿಸುವಂತಿಲ್ಲ. Birthday Chocolate ಹುಡುಗರಿಗೆ ಕೈಯಲ್ಲಿ, ಹುಡುಗಿಯರಿಗೆ Deskನ ಮೇಲೆ ಇಡುವು...

ONJI KSRTC YATHRE

Image
                                      ಕೆಂಪು SPARKS ಚಪ್ಪಲಿ ಸಿಕ್ಕಿಸಿಕೊಂಡವನೆ 5sec ಕಿಟಕಿಯ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು ಕೂದಲ ನಡುವೆ ಬೆರಳಾಡಿಸಿ ಗದ್ದೆಯ ಹುಣಿಯಲ್ಲಿ ಓಡುತ್ತಿದ್ದೆ. ಎಲ್ಲಿಯದರೂ ಗಂಟೆ 07:20AM ಕಳೆದಿದ್ದರೆ ಬಿಂಬ ನೋಡುಷ್ಟು ಪುರುಸೋತ್ತೂ ಇಲ್ಲ. ಬಹುಶಃ HIGH SCHOOLನ ನಂತರ ತಲೆಬಾಚಲು ಬಾಚಣಿಗೆ ಉಪಯೋಗಿಸಿರಲಿಕ್ಕಿಲ್ಲ ನಾನು. ಬಾಚಣಿಗೆಯಲ್ಲಿ ಚೆನ್ನಾಗಿ ತಲೆ ಬಾಚಿ ರಸ್ತೆ ಬದಿ TIE ಹಾಕಿಕೊಂಡು SCHOOL VANಗಾಗಿ ಕಾಯುತ್ತಿದ್ದ ನಾನು, ಸಮಯಪ್ರಜ್ಞೆ ಕಂಡುಕೊಂಡದ್ದು PUCಯ ನಂತರ. ಎದುರು ಮನೆಯ ಚೆನ್ನಪ್ಪ ಮಡಿವಾಳರ GLAMOUR ಶಬ್ಧ ಕೇಳಿದೊಡನೆ ನನ್ನ ಹೆಜ್ಜೆಗಳು ದೂರ ದೂರವಾಗಿಬಿಡುತ್ತಿದ್ದವು. ಮನೆಯಿಂದ ಬೆಳ್ಳಾರೆಗೆ 3km ದಾರಿ. ಬೆಳಗ್ಗಿನ ಬಹುತೇಕ ದಿನಗಳ ಪ್ರಯಾಣವನ್ನು ಅವರ GLAMOURನ ಹಿಂದಿನ SEATನಿಂದ ಕ್ರಮಿಸಿದ್ದೇನೆ. ಮಳೆಗಾಲದಲ್ಲಂತೂ SEATನ ಮೇಲಿದ್ದ ಮಳೆಹನಿಗಳನ್ನು ಹೀರಿಕೊಳ್ಳುತ್ತಿದ್ದುದು ನನ್ನ PANTSಗಳೇ. ಅಂತಿಮ ವರ್ಷದಲ್ಲಿ ಮೊದಲ ವರ್ಷ ಹೊಲಿಸಿದ PANTSನ್ನು GLAMOUR ಹತ್ತುವ ಮೂಲಕ ಹರಿಯಬಾರದ ಜಾಗಗಳಲ್ಲಿ ಹರಿಸಿಕೊಳ್ಳುತ್ತಿದ್ದೆ. ಕೆಲವು ಬಾರಿ ಬೆಳ್ಳಾರೆ ಪೇಟೆಯಲ್ಲಿ PILESನಂತೆ ಅನುಭವಿಸುತ್ತಾ BUSಗೆ ಕಾದಿದ್ದೇನೆ. ಈಗಲೂ ನನ್ನ BAGನಲ್ಲಿ ಸೂಜಿ ಮತ್ತು ನೂಲು ತಪ...

ಊರೆಲ್ಲಾ ಅವನದ್ದೇ ಸುದ್ದಿ

Image
                 ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು.  ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ.             ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರ...

last scene 03/05/2017

Image
               ಒಂದು ಡೈರಿ ಕಾಣೆಯಾಗಿತ್ತು. ಅಡಿಕೆ ಒಣಗಿಸಲು ಹಾಕಿದ Solar Tarpaulin ನ ಒಳಗೆ ಬಿದ್ದಿದ್ದ ಗೋಣಿ ಚೀಲದಲ್ಲಿ ಹುಡುಕುತ್ತಿದ್ದೆ. Solar Tarpaulin ಅಡಿಕೆ  ಒಣಗಿಸಲು ಇರುವ ವ್ಯವಸ್ಥೆಯಲ್ಲದೆ ಹಲವು ಉಪಯೋಗಗಳನ್ನು ಹೊಂದಿದೆ. ಅವುಗಳಲ್ಲಿ  ತಾತ್ಕಾಲಿಕ ಗುಜರಿ ಶೇಖರಣೆಯೂ ಒಂದು. ಹಾಗೆ ಸುಫಲದ ಗೋಣಿಯಲ್ಲಿ ಹುಡುಕುತ್ತಿದ್ದಾಗ ಪಿ.ಯು.ಸಿ ಯ ದಿನಗಳು ನೆನಪಿಗೆ ಬಂದವು. ಗೋಣಿಯನ್ನು ಅಡ್ಡ ಹಾಕಿದವನೇ C.E.T Question Paperನ್ನು ಹಿಡಿದು ನಿಂತೆ. ದಿನಾಂಕ 03/05/2015 ಎಂದು ನಮೂದಿಸಿತ್ತು. ಅದೇ ದಿನ ನಾನು  ಅವಳನ್ನು ಕೊನೇಯ ಬಾರಿ ಕಂಡದ್ದು.               PUC Exam Centre ಅದಲುಬದಲಾದ ವರ್ಷವದು. ನಮಗೆ ಕೊಂಬೆಟ್ಟು. CCTV Cam3ra ಇಲ್ಲವೆಂದು 'ಕೆಲವರಿಗೆ' ಖುಷಿ ಬೇರೆ. ನಾವು ಮಾತ್ರ ಅಲ್ಲ,  ಅಂಬಿಕದವರೂ ಇದ್ದಾರಂತೆ!!! ಅದೇ 'ಕೆಲವರಿಗೆ' ಮತ್ತಷ್ಟು ಖುಷಿ. ಆದರೆ Bus Stand ನಿಂದ 1km ನಡಿಗೆಯಿದೆ. ತ್ರಿವರ್ಣವನ್ನು ಹೊದ್ದಿರುವ ಕಂಬಗಳನ್ನು ನೋಡಿದಾಗ ಬಾಲ್ಯದ ಪ್ರಾಥಮಿಕ  ನೆನಪಾಗುತ್ತದೆ. ನಾನು ಅವಳನ್ನು ಮೊದಲು ಕಂಡದ್ದು 28/03/2017ರ Electronics Examನಂದು. Exam ಬರೆಯುವವರಲ್ಲಿ ಒಬ್ಬಳಾಗಿದ್ದ ಹುಡುಗಿ ಬರಬರುತ್ತಾ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಳು. ಮುಂದಲೆಯಲ್ಲಿ ಕುಂಕುಮ...

Kolikamale ; The Unknown peak

Image
ಇದು ಮೂರನೆಯದಾಗಿ ಬಂದ ಹೆಸರು, ಮೊದಲು ಗಡಾಯಿಕಲ್ಲು, ನಂತರ ಕಾಸರಗೋಡಿನ ರಾಣಿಪುರಂ ಪ್ರಸ್ತಾಪವಾಗಿತ್ತು. ಜಾಗ ಯಾವುದಾದರೇನು ಮಜಾ ಮಾಡೋದರಲ್ಲಿರೋದು. ಮೂರು ಜಾಗಗಳು ಚಾರಣದ ಸ್ಥಳಗಳೇ.ಮೂರನೆಯದ್ದು ಹೊರ ಜಗತ್ತಿಗೆ ಅಷ್ಟು ತೆರೆದುಕೊಂಡಿಲ್ಲ. ಆ ಊರಿನವರಿಗೆ ಮಾತ್ರವೇ ಅದರ ಜ್ಞಾನ. ಅದಿರೋದು ನನ್ನ Friend ಮೋಕ್ಷಿತ್‌ನ ಊರಿನಲ್ಲಿ.OK,  ಜಾಗ ಪಕ್ಕಾ ಆಯ್ತು. ಯೋಜನೆಗಳು ರೂಪಿತಗೊಂಡಿದ್ದು ಮೂರು ದಿನದ ವಜ್ರಮಹೋತ್ಸವದ ಹಿಂದಿನ ದಿನ, ಏಳು ಜನರ ಪಟ್ಟಿ ಸಿದ್ಧವಾಯಿತು. ಸಂಜೆ ಪರೋಟಕ್ಕೆ ಆರ್ಡರ್ ಕೂಡ ಆಯಿತು. ಬೆಳಗ್ಗೆ ನಾನು ಮತ್ತು ಪ್ರಸಾದ Mahindra  Duro ದಲ್ಲಿ ಸುಳ್ಯ ದತ್ತ ಹೊರಟೆವು. ಸುಳ್ಯ ತಲುಪಿದ ನಾವು Duro ಅನ್ನು Bus Standನ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಅವಿನಾಶ್‌ಗೆ ಕರೆ ಮಾಡಿದಾಗ, ಸಾಯಿನಾಥ್ ಆಗಲೇ ಸುಳ್ಯಕ್ಕೆ ತಲುಪಿದ್ದು, ನಮಗಾಗಿ  Bus Standನಲ್ಲಿ ಕಾಯುತ್ತಿದ್ದಾನೆಂದು ತಿಳಿಯಿತು. ನಂತರ Bus Standನಲ್ಲಿ ಸಾಯಿನಾಥ್‌ನನ್ನು ಸಂಧಿಸಿ, ಮೂರು ಜೋಡಿ ಕುರ್ಚಿಗಳಿರುವೆಡೆಗೆ ಹೆಜ್ಜೆಹಾಕಿ ಆಸೀನರಾದೆವು. ನಂತರದ 30 ನಿಮಿಷಗಳಲ್ಲಿ ಅವಿನಾಶ್ ಬಂದ, ಕೆಲವು ನಿಮಿಷಗಳ ನಂತರ ಮೋಕ್ಷಿತ್ ತಾನು ಜೀಪಿನಲ್ಲಿ ಬಂದಿರುವುದಾಗಿ ತಿಳಿಸಿದ. ಮೋಕ್ಷಿತ್‌ನ ಜೀಪು ಹತ್ತಿದ ನಾವು ಪರಗೇಟ್ ನಲ್ಲಿರುವ ಅವರ ಬಾಡಿಗೆ ಮನೆಯಿಂದ ನೀರಿನ ಬಾಟಲಿಗಳನ್ನು ಸಿದ್ಧಪಡಿಸಿದಾಗ ಅಲ್ಲಿಗೆ ಪ್ರಜ್ವಲ್ ಮತ್ತು ಅಭಿಷೇಕ್ ಬೈಕ್‌ನಲ್...

Trail of an Elephant

Image
                 'ನಿಡ್ಯಮಲೆಕ್ಕ್ Group ಮಾನ್ಪ್ಯರ ಇಜ್ಜಾ?' ಎಂದು ಕೇಳಿದಾಗ 'ದುಂಬುತವೇ ಉಂಡತ' ಎಂದು ಅವಿನಾಶ್ Screenshot ಕಳುಹಿಸಿದ. ನನ್ನ Number Delete ಮಾಡಿದ್ದರಿಂದಾಗಿ ನನ್ನಿಂದ ಕೈ ತಪ್ಪಿ ಹೋಗಿತ್ತು. Join ಆಗಿ ನೋಡಿದಾಗ 24 May 2019 ಆನ್ನೋ Label! Trip ಅಂದ್ರೆ ಹಾಗೇನೆ, ಅದಕ್ಕೆ ದಿನ ಬರೋದೇ ಇಲ್ಲ. ಎಲ್ಲರಿಗೂ ಪುರುಸೊತ್ತೇ ಇರೋದಿಲ್ಲ. ಒಬ್ಬರಿಗೆ ಮದುವೆ ಇದ್ದರೆ, ನಂತರದ ದಿನ ಇನ್ನೊಬ್ಬನಿಗೆ ಸಾವು. ಇನ್ನೊಂದು ದಿನ ಇನ್ನೊಬ್ಬರಿಗೆ ನೇಮ.               ಅಂತು January 19, 2020ರಂದು ನಮಗೊಂದು ಮುಹೂರ್ತ ಬಂತು. ಎಲ್ಲರೂ ಬೆಳಗ್ಗೆ Bikeನಲ್ಲಿ ಬಂದು ಮೋಕ್ಷಿತ್ ನ ಸುಳ್ಯದ ಬಾಡಿಗೆ ಮನೆಯಲ್ಲಿ ಜಮಾವಣೆಗೊಂಡೆವು. ಬರುವವರನ್ನು ಕಾದು, ಎಲ್ಲರೊಡಗೂಡಿ ಪೆರಾಜೆಯತ್ತ ಮುಖಮಾಡಿದೆವು. 6 km ದೂರದ ಪೆರಾಜೆಯಿಂದ ಇನ್ನೂ 9km ಅಂಡಿಗುಂಡಿ Road, ತಾರಮರ ತಿರ್ಗಸ್, ಯಮನಗುಂಡಿಯಂತಿರುವ ರಸ್ತೆ ಬದಿಗಳು. ಇವೆಲ್ಲವನ್ನು ಸೀಳಿ ಮೋಕ್ಷಿತ್ ನ ಇಲ್ಲ್ ತ ನೆರಳಿನಲ್ಲಿ Bike ನಿಲ್ಲಿಸಿದಾಗ ಅವನ 'Daddy' ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಕುರ್ಸಿನಲ್ಲಿ ಕೂತೊಡನೆ Order ತೆಗೆದುಕೊಂಡು ಚಹಾ ಮತ್ತು, ನಾನು ಚಹಾ ಕುಡಿಯುವುದಿಲ್ಲವಾದುದರಿಂದ ಹಾಲು ಬಂತು. ನಂತರ ನಮ್ಮ ಪಯಣ Jeep ನಲ್ಲಿ ಮೋಕ್ಷಿತ್ ನ Daddyಯ ಜೊತೆ ನಿಡ್ಯಮಲ...