Army ; The attachment

           
Near Virtual Firing Hall
  ಅಂದು 08/12/2019 ಬೆಳಗ್ಗಿನ ಐದುವರೆ ಗಂಟೆಗೆ ಮಡಿಕೇರಿ ಬಸ್ ಹತ್ತಿದ ನಾವು ತಲುಪಿದ್ದು 07:15ಕ್ಕೆ, ಇನ್ನೂ ಯಾರೂ Cadet ಗಳು ಬಂದಿರಲಿಲ್ಲ. ಹೊಟ್ಟೆಗೆ ಕೊಂಚ ಹಸಿವು, ಏನಾದರೂ ತಿನ್ನೋಣವೆಂದರೆ Laguage ಕಾಯೋದು ಯಾರು? ಭಾರ ಅಷ್ಟೇನಿಲ್ಲವಾದರೂ ಗೋಧಿ ಬೂಸದ ಚೀಲದಂತೆ ಕಾಣುವ Languageಗಳನ್ನು Hotelನೊಳಗೆ ತೆಗೆದುಕೊಂಡು ಹೋಗುವುದಾ? ಇದಕ್ಕೆಲ್ಲಾ ನಿಮೂರ್ತಿ ಆದದ್ದು ಮಡಿಕೇರಿಯ Cadetಗಳು ಬಂದ ನಂತರವೇ. Laguageನ್ನು ಅವರ ಬಳಿ ಕಾಯಲು ಇರಿಸಿ ಬಸ್ ನಿಲ್ದಾಣದ ಸರ್ತಕ್ಕೆ ಇರುವ ಎರಡೇ ಎರಡು ಮೇಜಿನ ತರೆದ ಹೋಟೇಲಿನಲ್ಲಿ ಹೋಗಿ ಕುಳಿತೆವು. "ಇಡ್ಲಿ ವಡೆ , ಪಲಾವ್" ಎಂದಾಗ "ಎರಡೆರಡು ವಡೆ ಕೊಡಿ ಸಾಕು" ಎಂದು ಎರಡು ವಡೆ ಕಾಲಿಯಾದಾಗಲೂ ಹಸಿವು ಕಮ್ಮಿ ಆಗಲಿಲ್ಲ. ಇನ್ನೆರಡು ವಡೆಗಳ ಜೊತೆಗೆ ಹುಡುಗಿಯರ ಕಿರುಬೆರಳಿನಲ್ಲಿ ಬಿಟ್ಟ ಉಗುರಿನಷ್ಟು ದೊಡ್ಡ ಲೋಟದಲ್ಲಿ ಒಂದು ಕಾಫಿ ಕುಡಿದೆವು. ಹಸಿವೇನೂ ಮಾಯವಾಯಿತು ಆದರೆ ಅಮ್ಮನ ಮಾತು ನೆನಪಿಸಿಕೊಂಡಾಗ ಆತಂಕ " ನನ ಬಡಾಪುಂಡುಂದಂತ್ ತಿಕ್ಕ್ ನೆನ್ ಮಾಂತ ತಿನೊರ್ಚಿ ಮರೆ ಆ ಘಟ್ಟಟ್ !".

              ಎಲ್ಲರೊಡಗೂಡಿ ಮೈಸೂರು ಬಸ್ ಹತ್ತಿದೆವು.ಕುಶಾಲನಗರದಲ್ಲಿ ನಮಗಾಗಿ ಕಾಯುತ್ತಿದ್ದವರ ಜೊತೆಯಲ್ಲಿ 12:00ರ ಹೊತ್ತಿಗೆ ಮೈಸೂರು ರೈಲ್ವೇ ನಿಲ್ದಾಣ ತಲುಪಿದೆವು. ಗಗನದೆತ್ತರಕ್ಕೆ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನು ಕ್ಲಿಕ್ಕಿಸಿ Status, story ಹಾಕಿಕೊಂಡು ನಾಲ್ಕನೇ platformನತ್ತ ಹೋದಾಗ ಮೈಸೂರು - ಕಾಚಿಗುಡ ರೈಲು ಹಿಂದಿನ ದಿನದ ಪ್ರಯಾಣದಿಂದ ಬಚ್ಚಿ rest ತೆಕೊಲ್ತಿತ್ತು. ಸುಮಾರು 1ಗಂಟೆಯ ಹೊತ್ತಿಗೆ Batallion senior ಕೈಗೆ Ticket ಸಿಕ್ಕಾಗ ರೈಲು ಹತ್ತಿದವು. Reserve Ticket ಆದರೂ ತಿರ್ತ ಬೆಡ್ ನಮಕ್ ಇಜ್ಜಿ! ಮಧ್ಯಾಹ್ನದ ಬುತ್ತಿ ಊಟ ಮುಗಿಸಿಕೊಂಡು Window seatಗೆ ಜಗಳವಾಡುತ್ತಾ ಬೆಂಗಳೂರು ತಲುಪಿದಾಗ Window Seatನ ಮಾಲೀಕರು ಬಂದೇಬಿಟ್ರು. ಇನ್ನು ಊಟಮಾಡಿ ಮಲಗಿಕೊಂಡಾಗ ನಮ್ಮ Mysore - Kacheguda Super-Fast Express ನಡುರಾತ್ರಿಯಲ್ಲಿ ರಣತ್ತಂಚನೆ ವೇಗವಾಗಿ ಹೋಗುವಾಗ ಮೇಲೆ ಮಲಗಿದವರಿಗೆ ತೊಟ್ಟಿಲಿನಲ್ಲಿ ತೂಗಿದ ಅನುಭವ. ಆದರೂ ಲಟಲಟ ಶಬ್ದ, ಅಂಗಡಿಯ shutter ಎಳೆದಂತಹ ಶಬ್ಧ ತೀರ್ವವಾದಾಗಲಂತೂ News Parerನಲ್ಲಿ ನೋಡಿದ ರೈಲು ದುರಂತದ photoಗಳು horizontal ಆಗಿ ಒಮ್ಮೆ scroll ಆಗುತ್ತವೆ.
       ರೈಲು ಸುಮಾರು 7 ಗಂಟೆಗೆ ಕಾಚಿಗುಡ ತಲುಪಿತು. ಅಲ್ಲಿಂದ ಇನ್ನೊಂದು City ರೈಲಿನಲ್ಲಿ ತೆರಳಬೇಕೆಂಬ ಗಾಳಿಸುದ್ದಿ ಸುಳ್ಳಾಯಿತು. Truck ಬರುತ್ತದಂತೆ ಎಂದು 2ಗಂಟೆ ರೈಲ್ವೇ ನಿಲ್ದಾಣದಲ್ಲಿ ನಿರಾಶ್ರಿತರಂತ ಕಳೆದೆವು. ನಂತರ Entrance ಕಡೆ ಬಂದು Roadನಲ್ಲಿ ಜಮಾವಣೆಗೊಂಡವು. ಅಲ್ಲೂ Truckಗಾಗಿ ಅರ್ಧ ಗಂಟೆ! ಮುಂಗಾರಿನ ಹೊಡೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾದ ಏನೆಲ್ ನೇಜಿಯಂತೆ ರೋಡಿನಲ್ಲಿ ಬಿದ್ದುಕೊಂಡು ನಿದ್ರಿಸುತ್ತಿದ್ದ ನಮಗೆ 75m ಅಣತಿಯಲ್ಲಿ ಬರುತ್ತಿದ್ದ Truckಗಳನ್ನು ಕಂಡು ಪುನಃ ನಾಟಿ ಮಾಡಿದಂತಹ ಅನುಭವ. ಎಲ್ಲರೂ ಉತ್ಸುಕರಾದೆವು, ಸರತಿಸಾಲಿನಲ್ಲಿ Truck ಹತ್ತಿದೆವು. ಅವುಗಳು ಸೈನ್ಯದ ವಿಶೇಷ Truckಗಳು, ಹತ್ತಲು-ಇಳಿಯಲು ಮಟ್ಟಿಲಿನ ವ್ಯವಸ್ಥೆ, ಉದ್ದಕ್ಕೆ ಎರಡು ಬದಿ ಎರಡೆರಡು ಎದುರು ಬದುರು ಆಸನಗಳು, ಹಿಂದೆ ಸುರಕ್ಷತೆಗೆ Net ಮತ್ತು ಅದರಲ್ಲಿ ಬಗ್ಗೆ ಪ್ರವೇಶಿಸಬೇಕಾದ ಮಾದರಿಯ ಬಾಗಿಲು, ನಂತರ ನಗರದ Traffic ಅನ್ನು ಸೀಳಿಕೊಂಡು Centre ತಲುಪುವುದಕ್ಕೆ 01:15pm ತೆಗೆದುಕೊಂಡಿತು.

ಅದು EME(Electrical & Mechanical Engineering)ನ 1st Training Battalion, Truckನಿಂದ ಇಳಿದು Football Groundನಲ್ಲಿ ಜಮಾವಣೆಗೊಂಡ ನಾವು  Instructionsನೊಂದಿಗೆ Sports Coyಯ  Barrackಗೆ ಹೆಜ್ಜೆ ಹಾಕಿದೆವು. 19KARಗೆ ತುದಿಯ ಅಂದರೆ ಎರಡನೇ ಮಹಡಿಯ ಬಲ ಭಾಗ, ಅದು 'ಬಯಕ್ಕೆ'ಯ Hallನಂತಹ ಅಂದಜಿಯ Hall, ನಡುನಡುವೆ Plywood ಛೇದಕಗಳು, ಅದರ ನಡುವೆ 3X6 ಮಾದರಿಯ ಮಂಚಗಳು, ಅವು ಮಂಚಗಳ ಬದಲಾಗಿ ಉಯ್ಯಾಲೆಯಂತಾಗಿದ್ದವು. Tape ಭಾಗಶಃ ಕುಂಭಾಗಿತ್ತು! ನೀರು ಬೇಕಾದ ಸಮಯದಲ್ಲಿ ಇರಲಿಲ್ಲ. ನೀರಿನ ಸಮಯಕ್ಕೆ ನಾವು ಇರಬೇಕು. ಇದು ನಮ್ಮ ದಿನಚರಿಯನ್ನೇ ಬದಲಿಸಿತು. ಯಾವ ಮುಂಜಾನೆಯೂ ನೀರಿನ ವ್ಯವಸ್ಥೆ ಸಿಗಲಿಲ್ಲ. Brushing, Shaving ಹಿಂದಿನ ದಿನ ನೀರು Mugನಲ್ಲಿ ತೆಗೆದಿಡಬೇಕು. ಒಂದು ದಿನ ಒಂದೇ ಪಾಟೆಯಲ್ಲಿ ಇಬ್ಬರು ಹಲ್ಲುಜ್ಜಿ, Shaving ಮಾಡಿದ್ದು, ನಾನು ಮತ್ತು ನನ್ನ ಗೆಳೆಯನಿಗೆ ಮರೆಯಲಾಗದ ಸನ್ನಿವೇಶ, ಕುಡಿಯುವ ನೀರು ಇರುವುದು ಊಟದ ಮನೆಯ ಹತ್ತಿರ, ಅದು 1km ದೂರ. ಅಲ್ಲಿ ಇರುವುದೇ ಅಪರೂಪ! ಅಲ್ಲೂ ಇಲ್ಲವೆಂದರೆ ಇನ್ನೊಂದು km ಹೋಗಿ Milkha Singh Stadium ಪಕ್ಕದಿಂದ ತರಬೇಕು. ಎಲ್ಲಾ ವ್ಯವಸ್ಥೆಗಳಿವೆ ಆದರೆ ಕಾಲ ಬುಡದಲ್ಲಿ ಸಿಗುವುದಿಲ್ಲ, ಕಷ್ಟ ಪಡಬೇಕು, ಅದೇ ಸೈನ್ಯ!
          ಹೊಟ್ಟೆ ತುಂಬಾ ಊಟ, ಮೊದಮೊದಲೆಲ್ಲಾ ಬೆಳಗ್ಗೆ ಒಂದೆರಡು ಪೂರಿಯಲ್ಲಿ ಸಹಿಸಿಕೊಳ್ಳಬೇಕಾಯಿತು. ಮತ್ತೆ ನಮ್ಮ In chargeಗೆ ದೂರು ಕೊಟ್ಟ ನಂತರ ಬಿಗಡಾಯಿಸಿತು. ಆತ MP Singh ಅಂದರೆ Mahendra Pal Singh, 17ರ ಯುವಕನಂತಿರುವ ಇವರಿಗೆ ಆಗಲೇ 24 ವರ್ಷ ಸೇವೆ ಮುಗಿದು 34ರ ಹರೆಯ ಎಂದಾಗ ಆಶ್ಚರ್ಯವಾಗುತ್ತದೆ. 'ಹುಡುಗಿಯಾಗ್ತಿದ್ರೆ ಇನ್ನೆಷ್ಟು ಚಂದ ಕಾಣ್ತಿದ್ರೋ” ಎನ್ನುವಷ್ಟು ಹುರುಪಿನ ಮುಖ, ಎಡಗೈಯಲ್ಲೊಂದು ಕಾಫಿ ಬಣ್ಣದ Watch, ಇನ್ನುಳಿದೆಲ್ಲಾ ಯೋಧನೇ.
         ಮೊದ ಮೊದಲು "ಒರ ಮುಗಿಂಡ ಯಾರು ಮರೆ” ಅನ್ನುತ್ತಿದ್ದ ನಾವು ನಂತರ ಸೈನಿಕ ತರಬೇತಿಯ ರುಚಿ ಹಿಡಿದೆವು. ಆಹಾರವೂ ಹಿಡಿಸಲಾರಂಬಿಸಿತು. ದಿನೇ ದಿನೇ ಹೊಸ ಜ್ಞಾನದ ಪ್ರಾಪ್ತಿ, Obstacle pass ಮಾಡಿದ ಹಿರಿಮೆ.ಜೀವನದಲ್ಲೇ ಮೊದಲು Black Box ನೋಡಿದ್ದು, Helicopterನ್ನು ಕೈಯಾರೆ ಮುಟ್ಟಿದ್ದು, Golkonda Fort, Museum, Milkha Singh Ground, "ಲೆಫ್ಚ್ - ರೈಚ್ - ಲೆಫ್ಚ್ !", "ಏssಕ್ ದೋss ತೀsssನ್ ಏಕ್", Food Canteen, ಪೊಯ್ಯೆತ ಗೋಣಿ, Parade Ground, ಹಸಿವು ತಾಳಲಾರದೆ ಲತ್ತ್, ಪೇರಳೆ ತಿಂದದ್ದು, Root March, ಯುದ್ಧ ವಿಮಾನ ಹಾದು ಹೋದಾಗ ಬಲ್ಲೆಯಲ್ಲಿ ಅಡಗಿ ಕೆಂರ್ಬಿಸಿಕೊಂಡದ್ದು, Trench ಅಗೆದದ್ದು, Tent Pitching Competition, ಜೀವನದ ಮೊದಲ Basket Ball Match ನಲ್ಲೇ ಜಯ, ಎದುರಾಳಿ ಮೈಮರೆತು ನಮಗಾಗಿ ಹೊಡದ ಮೊದಲ Goal! ವಿವಿಧ Battalionಗಳ ಭೇಟಿ, ಕಳವಿನ ತನಿಖೆ, Rs.10ರ ಬಡವರ ಬಂದು Gluco Drink, ಹುಣಸೆ ಹುಳಿ, Kabaddi, Football, ಕರೀಂ ಭಾಯ್! ಎಲ್ಲಾ ಮರೆಯಲಾಗದ ಗುರುತುಗಳು.
          ಕೊನೇಯ ದಿನ EMEಗಾಗಿ 20 Push Up ಹೊಡೆದು Truck ಹತ್ತಿದವು. ಮತ್ತದೇ ಒಂದುವರೆ ಗಂಟೆಯ Traffic, ನಮ್ಮನ್ನು ಹತ್ತು ದಿನಗಳಿಂದ ನೋಡದೆ ಮುದುಡಿದ್ದ ರೈಲು, ಹತ್ತಿದ ತಕ್ಷಣ ಕುಚು-ಕುಚು ಅನ್ನತೊಡಗಿತು. ಮರುದಿನ 09:00ಕ್ಕೆ ಮೈಸೂರಲ್ಲಿ ಇಳಿದೆವು. Police Store ಗೆ ಹೋದವರು Badge ಗೆ
Background Cloth ತಂದುಕೊಟ್ಟರು. ಇನ್ನು ನಮಗುಳಿದದ್ದು

ಕುಶಾಲನಗರ - ಮಡಿಕೇರಿ - ಸುಳ್ಯ - ಪುತ್ತೂರು

(Vicinity & Training descriptions were muffled, spite of security measure)

L/CPL. ASHITH RAIT
           

Comments

  1. Awesome broo.....ua writing skill were tremendous.....मुझे लगा कि मैं आपकी यात्रा में हूँ.Write may more stories.all the best brother...😍😍👍👏

    ReplyDelete

Post a Comment

Popular posts from this blog

Monsoon Treasure

Those Days of Birth Days

OPEN HEART