Dandeli Days





ಕುಮಾರಪರ್ವತ ಚಾರಣದಂದು ಭಟ್ರಮನೆಯ TENTನಲ್ಲಿ ಮಲಗುವಾಗ ನನ್ನ ಮೊದಲ TENT STAY ನೆನಪಾಯಿತು. ಅಂದು 09/12/2021ರ ರಾತ್ರಿ, ಕಾಲೇಜಿನ ಅಂಗಳದಲ್ಲಿ ಗಂಟು ಮೂಟೆಗಳೊಂದಿಗೆ ಕಾಯುತ್ತಾ ಕುಳಿತಿದ್ದಾಗ ನಾವು ಕಾಯುತ್ತಿದ್ದ ಬಸ್ ಬಂದೇ ಬಿಟ್ಟಿತ್ತು. ನಮ್ಮ ಕಾಲೇಜಿನ ಎದುರಿನ ರಸ್ತೆಯಲ್ಲಿ ನಿಂತಿದ್ದ ಬಸ್ ನ ಎದುರು ನಿಂತು ಎಲ್ಲರೊಡಗೂಡಿ ಪ್ರಾರ್ಥಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಶ್ರವಣ್ ಆಳ್ವ ಸಾಂಕೇತಿಕ ಚಾಲನೆ ನೀಡಿದ. ಎಲ್ಲಾ ಯಾತ್ರೆಗಳಲ್ಲಿ ಇರುವಂತೆ ತಮಗೆ ಬೇಕಾದ ಸೀಟ್ ಗಿಟ್ಟಿಸಿಕೊಳ್ಳಲು ಇಲ್ಲಿಯೂ ಬಸ್ ಹತ್ತಲು ತುಸು ಅವಸರ. ಕಾಲೇಜಿನಿಂದ ಹೊರಟು, ಶಿರೂರು TOLL GATE ವರೆಗೆ ಕುಣಿದು, ದಣಿದು ನಿದ್ರೆಗೆ ಜಾರಿದ ನಮಗೆ ಎಚ್ಚರವಾದದ್ದು ಮರುದಿನ ಎಲ್ಲೋ, ಅಮ್ಚಿನಡ್ಕ  ಮತ್ತು ಸುಳ್ಯದ  ಮಧ್ಯೆ ಇರುವಂತಿರುವ  ರಸ್ತೆಯ ಬದಿ ಬಸ್ ನಿಲ್ಲಿಸಿದಾಗಲೇ. ಹಳ್ಳಿಯೊಂದನ್ನು ತಲುಪಿ ಹೋಟೆಲೊಂದರಲ್ಲಿ ಹಲ್ಲುಜ್ಜಿ ಉಪಹಾರ ಸೇವಿಸಿದೆವು. ಕಾಡಿನ ನಡುವೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ, ಗಗನಚುಂಬಿ ಮರಗಳ ಕೆಳಗೆ ಬಸ್ ನಿಲ್ಲಿಸಲಾಯಿತು. ಬಸ್ ನಿಂದ ಇಳಿದೊಡನೆ ಉತ್ಸುಕರಾಗಿದ್ದೆವು. ನೀರಿನ ಮೋಜಿಗೆ ಸರಿಹೊಂದುವ ಉಡುಪಿನ ಮೇಲೆ LIFE JACKET ಮತ್ತು HELMET ಧರಿಸಿ ನದಿಯ ದಡಕ್ಕೆ ಬಂದು ನಿಂತೆವು. ನಮ್ಮ ದೊಡ್ಡ ಗುಂಪು ವಿವಿಧ ಆಟಗಳಲ್ಲಿ ಚದುರಿಹೋಯಿತು.

Kayaking

<photo>

Zorbing

<photo>

Rafting



Jacuzzi Bath


ಎಲ್ಲಾ ಆಟಗಳಲ್ಲಿ ಮಿಂದೆದ್ದು. ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ RESORTನತ್ತ ಪಯಣಿಸಿದವು. RESORTನಲ್ಲಿ ಮಧ್ಯಾಹ್ನದ ಉಪಹಾರ ಸೇವಿಸಿ ವಿಶ್ರಾಂತಿ ಪಡೆದೆವು. ನೀರಿನ ಚಟುವಟಿಕೆ ಆಗಿದ್ದರಿಂದ ಸ್ನಾಯುಗಳು ತುಂಬಾ ಬಳಲಿದ್ದವು. ಸಂಜೆಯಾಗುತ್ತಲೇ

Swimming Pool


Rain Dance
<photo>
Tent Stay
<photo>

ರಾತ್ರಿಯ ಊಟದ ನಂತರ CAMPFIREನ ಮುಂದೆ ಕುಳಿತ ನಮಗೆ ದಾಂಡೇಲಿಯ ತಣ್ಣನೆ ಗಾಳಿಗೆ ಬೆಂಕಿಯ ಜ್ವಾಲೆ ಬೆಚ್ಚಗಿನ ಅನುಭವ ನೀಡಿತು. ಪಕ್ಕದಲ್ಲಿ PLASTIC ಬಿಲ್ಲಿನಿಂದ PLASTIC ಬಾಣಗಳನ್ನು PLASTICಗುರಿಯೆಡೆಗೆ ಹೊಡೆಯುವ ಸ್ಪರ್ಧೆ ಪ್ರಾರಂಭವಾಗಿತ್ತು. ಕೆಲವರು ಹೂಡಿದ ಬಾಣಗಳು ದೂರದ ಶೌಚಾಲಯದ ಗೋಡೆಗಳಿಗೂ ಅಪ್ಪಳಿಸಿದ್ದವು! ರಾತ್ರಿ ಮಲಗುವ ಮುಂಚೆ BAGನಲ್ಲಿದ್ದ PLAYING CARDSನ ನೆನಪಾಯಿತು. ಮತ್ತೆ ಪ್ರಾರಂಬವಾದದ್ದು 'ಕತ್ತೆ'(DONKEY) ಮತ್ತು 'ಲೊಟ್ಟೆ ಕತ್ತೆ'(BLUFF MASTER)!


ಬೆಳಗಿನ ಉಪಹಾರ ಮುಗಿಸಿ BREAK ಇಲ್ಲದ CYCLE ಹೊಡೆಯಲಾರಂಬಿಸಿದೆವು.  ದಾರಿಯು ಕಿಲೋಮೀಟರ್ ಗಟ್ಟಲೆ ಒಂದೇ ಇಳಿಜಾರು ಆಗಿದ್ದರಿಂದ ಮೇಲೆಯವರಗೆ ತಾ ಮುಂದು, ತಾಮುಂದು ತುಳಿದು ನಂತರ ಗುರುತ್ವಾಕರ್ಷಣೆಯೊಂದಿಗೆ ಹಿಂದಿರುಗಲು ಮಜವಾಗಿತ್ತು. ನಂತರ ದಾರಿ ನಿರ್ದೇಶಕ TREKKING ಎಂದು ಸಾಗುವಾನಿ ನೆಡುತೋಪಿನಲ್ಲಿ ಕರೆದುಕೊಂಡು ಹೋದದ್ದು ಸ್ವಲ್ಪ ಗರ್ವ ಬರಿಸಿತು. ನೆಡುತೋಪು ಮುಗಿದ ನಂತರ ಯಾವುದೋ ಮಜಲು ಗದ್ದೆಯನ್ನು ತೋರಿಸಿ "SEE THE VIEW! " ಅನ್ನತೊಡಗಿದ. ನಂತರ ಮಾರ್ಗವೊಂದರಲ್ಲಿ ಮುಂದೆ ಸಾಗಿ ಒಂದು ಕಾಲುವೆಗೆ ಇಳಿದು ಎಲ್ಲರು ಆನಂದಿಸಿದರು.

 ನಂತರ 'ಗೌಳಿವಾಡ' ಎಂಬ ಹಳ್ಳಿ ತಲುಪಿದೆವು. ಅಲ್ಲಿ ನಿರ್ಧಿಷ್ಟ ಸಂಸ್ಕೃತಿಯ ಜನರು ಜಾನುವಾರುಗಳ ಜೊತೆ ವಾಸವಾಗಿದ್ದರು. ಅವರ ಮನೆಗಳು, ಬೇಲಿಗಳು ಮತ್ತಿತರ ಕಟ್ಟಡಗಳು ಸ್ಥಳೀಯ ವಸ್ತುಗಳಿಂದ ಮಾಡಲ್ಪಟ್ಟು ವಿಭಿನ್ನವಾಗಿದ್ದವು. ಪಕ್ಕದಲ್ಲೇ ಒಂದು ಸರಕಾರಿ ಶಾಲೆಯೂ ಇತ್ತು. 


 ಬರುವಾಗ ದಾರಿಯಲ್ಲಿ ಕಾಡಿನ ಮಧ್ಯೆ ಅವರ ವನ ಆರಾಧನಾ ಸ್ಥಳವೂ ಕಾಣಸಿಕ್ಕಿತು. ನಮ್ಮ TREKKING! ವ್ರೃತ್ತಾಕಾರವಾಗಿ RESORT ದಾರಿಯನ್ನು ಸಂಧಿಸಿತು.

    ಮಧ್ಯಾಹ್ನದ ಊಟಕ್ಕೆ ಮುಂಚೆ CARROMಆಡತೊಡಗಿದೆವು. ಕೊನೆಯಲ್ಲಿ ಒಂದೊಂದು ಕೆಂಪು ಮತ್ತು ಕಪ್ಪು ಉಳಿದಿರುವಾಗ ಆಟ ಮುಗಿಯದಿರಲಿ ಎಂದು ನಾನು ಪ್ರತಿ ಬಾರಿಯು ಕಪ್ಪನ್ನೇ ಹೊಡೆಯುತ್ತಿದ್ದೆ. 'ಒಮ್ಮೆ ಯಾರಾದರು ಕೆಂಪನ್ನು ಗೆದ್ದು ಆಟ ಮುಗಿಯಲಿ ದೇವರೇ' ಎಂದು ಕಾಯುತ್ತಿರುವವರಿಗೆ ಈ ರೀತಿಯಲ್ಲಿ ಕೊಡುವ ಹಿಂಸೆಯ ಮಜವೇ ಬೇರೆ! . ಮಧ್ಯಾಹ್ನ ನಾವೇ ಬಡಿಸಿಕೊಳ್ಳುವಂತೆ, ಬೇಕಾದಷ್ಟು ಕೋಳಿ ಊಟ. ಬೇರೆ ಮೂರು-ನಾಲ್ಕು ಬಗೆಯ ಇತರೆ ಪದಾರ್ಥಗಳು. ಊಟ ಮುಗಿಸಿ ನಾವು ಹೊರಟದ್ದು ವಿಭೂತಿ ಜಲಪಾತಕ್ಕೆ.  'ಲೊಟ್ಟೆ ಕತ್ತೆ'ಯ ಚಟ ಬಸ್ ನಲ್ಲೂ ಬಿಟ್ಟಿರಲಿಲ್ಲ. 

ಬಸ್ ನಿಂದ ಇಳಿದ ನಮಗೆ ಒಂದು ಸುಂದರ ಮಜಲು ಗದ್ದೆಗಳ ಸಾಲಿನ ನಡುವೆ ಇರುವ ಮನೆಯ ಸುಂದರ ದೃಶ್ಯ. ಜಲಪಾತಕ್ಕೆ ನಡೆದು ಹೋಗಬೇಕು. ಕಾಡಿನ ನಡುವಿನ ದಾರಿಯಾಗಿದ್ದರಿಂದ ಬೇರಿನ ಮೆಟ್ಟಿಲುಗಳು ವಿಭಿನ್ನ ಅನುಭವ ನೀಡಿದವು. ಮುಂದಕ್ಕೆ ಸಾಗುತ್ತಿರುವಂತೆ ನೀರಿನ ಸದ್ದು ಹೆಚ್ಚಾಗುತ್ತಾ ಹೋಯಿತು. ಇನ್ನೇನು ಮುಂದೆ ನೋಡಿದರೆ ಕಲ್ಲಿಗೆ ಸೀರೆ ಉಡಿಸಿದಂತಿರುವ ಮೋಹಕ ಜಲಪಾತ. 



ಈಜು ಬಲ್ಲ ಮುಜಾಮಿಲ್ ಚಂಗನೆ ದುಮುಕಿ ಈಜತೊಡಗಿದ. ಕಬಡ್ಡಿಯ ಬಗೆ ಒಂದು ಮಾತಿದೆ, 'ಧೈರ್ಯವಿರುವವರು ಅಂಕಣದ ಒಳಗಿರುತ್ತಾದರೆ, ಇಲ್ಲದವರು ಹೊರಗೆ ನೋಡುತ್ತಿರುತ್ತಾರೆ'. ಹಾಗೆಯೇ ಈಜು ಬರದವರು ಈಜುವವರನ್ನು ನೋಡಬೇಕಷ್ಟೆ. ಈಜು  ಬರುವುದು ಅಥವಾ ಬರದೇ ಇರುವುದು ಎರಡೂ ಅಪಾಯಕಾರಿಂಯೇ. ಯಾಕೆಂದರೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸತ್ತವರಿಗಿಂತ ಈಜು ತಿಳಿದು ಈಜಲು ಹೋಗಿ ನೀರು ಪಾಲಾದ ಜನರ ಲೆಕ್ಕವೇ ಹೆಚ್ಚು. ನಮಗೆ ತಿಳಿದಿರುವ ವಿಷಯಗಳು ನಮ್ಮನ್ನು ಆಯಾ ವಿಷಯಗಳಲ್ಲಿ ನಿಪುಣನಾಗುವುದರ ಜೊತೆಗೆ ನಮ್ಮೊಳಗೊಂದು ಹುಚ್ಚು ಧರ್ಯವನ್ನೂ ಸೃಷ್ಟಿಸಿಬಿಡುತ್ತದೆ! ಸಮಯದ ಅಭಾವವಿದ್ದರಿಂದ ಯಾನ ಮತ್ತು ಮುರುಡೇಶ್ವರದ ಸಮುದ್ರ ತೀರದ ನಡುವೆ ಗೊಂದಲಗೊOಡು ಸಮುದ್ರ ತೀರವನ್ನು ಆರಿಸಿದೆವು. 


ನಾವು ಮುರುಡೇಶ್ವರ ತಲುಪಿದಾಗ  ರಾತ್ರಿಯಾಗಿತ್ತು. ದೇವಸ್ಥಾನದ ಬಾಗಿಲು ಮುಚ್ಚಿತ್ತು ನಮ್ಮನ್ನು ಸ್ವಾಗತಿಸಲು ನಕ್ಷತ್ರಗಳು ಕಾದಿದ್ದವು. ಅವುಗಳನ್ನು ಹೊರತುಪಡಿಸಿ ಸಮುದ್ರ ತೀರ ನೋಡಲು ಬಂದವರಿಗೆ ತೆರೆಯ ನೋರೆ ಮತ್ತು ಆರ್.ಎನ್ ಶೆಟ್ಟಿ ಹೋಟೇಲಿನ ನೀಲಿ ನಾಮಫಲಕ ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಜನನಿಭಿಡ ಪ್ರದೇಶವಾದುದ್ದರಿಂದ ಮರಳಿನ ಮೇಲೆ ಮಲಗಿ ನಕ್ಷತ್ರಗಳನ್ನು ಎಣಿಸುವಷ್ಟು ಏಕಾಂತ ಅಲ್ಲಿರಲಿಲ್ಲ. .  ಸಮುದ್ರ ತೀರದಲ್ಲಿದ್ದ ಅರ್ಧ ಅಂಗಡಿಗಳು ಆಗಲೇ ಮುಚ್ಚಿದ್ದರು. ಇನ್ನುಳಿದವುಗಳನ್ನು ಇನ್ನೇನು ಮುಚ್ಚುತ್ತಿರುವಾಗ ಕೆಲವರು ಮನೆಯವರಿಗೆ, ಮಕ್ಕಳಿಗೆ ಉಡುಗೆರೆ ಖರೀದಿಸತೊಡಗಿದರು. ಒಂದು ದಾರಿಯ ಎರಡು ಬದಿಯಲ್ಲಿ ಉಡುಗೊರೆ-ಆಟಿಕೆಯ ಅಂಗಡಿಗಳಾದರೆ, ಅದರ ಪಕ್ಕದ ದಾರಿಯ ಎರಡು ಬದಿ ಆಹಾರದ ತಳ್ಳುವ ಗಾಡಿಗಳು ಇದ್ದವು. ಇನ್ನೂ ಊಟ ಮಾಡಿರಲಿಲ್ಲ. ಕೊಂಚ ಹಸಿವಿನಿಂದಾಗಿ ಕಾಯಿಸಿದ ಮೀನು ತಿನ್ನೋಣ ಅನಿಸಿತು. ನಾನು, ಶ್ರವಣ್ ಮತ್ತು ಮನೋಜ್ ಒಂದು ಮೀನಿನ ಬೆಲೆ ಕೇಳಿದೆವು. "ಅಂಗಡಿ ಮುಚ್ಚುತ್ತಿದ್ದೇನೆ, ಎಂಬತ್ತು ಕೊಡಿ ಸಾಕು" ಎಂದ. ಮೀನು ಸುಮಾರು ಎರಡು ಅಡಿ ಉದ್ದ ಇದ್ದುದರಿಂದ ಅಷ್ಟು ದೊಡ್ಡ ಮೀನು ಅಷ್ಟು ಕಡಿಮೆಗೆ ಸಿಕ್ಕಿತಲ್ಲಾ ಎಂದು ಉದ್ಗರಿಸಿದೆವು. ಮೀನಿನ ರುಚಿನೋಡಿದಾಗಲೇ ಗೊತ್ತಾದದ್ದು, ಇದು ಯಾವುದೋ ಕಡಿಮೆ ರುಚಿಯ, ಕಡಿಮೆ ಬೇಡಿಕೆಯ ಮೀನು ಎಂದು! . ಸಮುದ್ರ ತೀರದಲ್ಲಿ ಅತ್ತಿಂದಿತ್ತ ಓಡಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಕಾಲ ಕಳೆದೆವು. ಅಲ್ಲಿ ನಿಲ್ಲಿಸಿದ್ದ ದೋಣಿಯೊದರ ಮೇಲೆ ನಿಂತು ಫೋಟೋ ಕ್ಲಿಕ್ಕಿಸಲೆಂದು ಹತ್ತಿದಾಗ ಅಲ್ಲಿದ್ದ ಬೆಸ್ತರು ಬೈದರು. ದೋಣಿಯ ಮೇಲೆ ಚಪ್ಪಲಿ ಹಾಕಿ ನಿಲ್ಲಬಾರದೆಂಬುದು ಅವರ ನಂಬಿಕೆ. ಅತ್ತ ಯಾನವೂ ಇಲ್ಲ ಇತ್ತ ಸಮುದ್ರ ತೀರವೂ ಇಲ್ಲ, ಸುಮ್ಮನೆ ಚಪ್ಪಲಿಯಲ್ಲಿ ಮರಳು ಅಂಟಿಸಿಕೊಳ್ಳುವುದಕ್ಕೆ ಹೋದಂತಾಗಿತ್ತು. 


ಸರಿಯಾಗಿ ಮುಂಜಾನೆ ಮಂಗಳೂರು ತಲುಪುವಂತೆ ಸಮಯ ಹೊಂದಿಸಲು ಕೆಲವು ತಾಸು ಅಲ್ಲೇ ಕಾಲ ಕಳೆಯಬೇಕಾಗಿತ್ತು. ಬಸ್ ನಿಲ್ದಾಣದಲ್ಲಿ ಚಪ್ಪಲಿಯಲ್ಲಿದ್ದ ಮರಳನ್ನು ತೆಗೆಯುತ್ತಾ, ಹಳೆಯ-ಹೊಸ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಮಯ ಕಳೆದೆವು. 'ಲೊಟ್ಟೆ ಕತ್ತೆ'ಯ ಚಟ ಪ್ರಯಾಣದುದ್ದಕ್ಕೂ ಅಂಟಿಕೊOಡಿತ್ತು. ಬಸ್ ಹತ್ತಿ ಕೊನೇಯ ಸುತ್ತು ಕುಣಿದು ನಿದ್ರಿಸಿದ ನಮಗೆ ಮತ್ತೆ ಎಚ್ಚರವಾದದ್ದು ಉಡುಪಿಯ ಸಹಪಾಠಿಗಳು ಇಳಿಯಲೆಂದು ಬಸ್ ನಿಲ್ಲಿಸಿದಾಗ.ಮಂಗಳೂರಿನ ನಮ್ಮ ಕಾಲೇಜು ತಲುಪಿದಾಗ  ನಮ್ಮ ನಮ್ಮ WATER BOTTLE ಮತ್ತು MOBILE CHARGERಗಳನ್ನು ಹುಡುಕತೊಡಗಿದೆವು.

Comments

Popular posts from this blog

Monsoon Treasure

Those Days of Birth Days

OPEN HEART