THE WAY WE TRAVEL

                






ಪ್ರಯಾಣಿಸಲು BUS ಹತ್ತಿದೊಡನೆ BAGನಿಂದ MOBILE ಮತ್ತು EARPHONE ತೆಗೆಯುವುದು ಒಂದು ಸಾಮಾನ್ಯ ಅಭ್ಯಾಸ.  ಹಿಂದೆ ಪ್ರಯಾಣಿಸಿದ ದಾರಿಯಲ್ಲೇ ಪ್ರಯಾಣಿಸುವಾಗ, ಅದೇ ಪ್ರಯಾಣಿಕರು, ಅದೇ ನಿಲ್ದಾಣ, ಅದೇ ತಿರುವು. ಏನಾದರು ಹೊಸತನವಿರಲೆಂದು ಪದ್ಯ ಕೇಳುವ ಅಭ್ಯಾಸ. BUSನಲ್ಲಿ SEATಸಿಗದಿದ್ದರೆ ಆ ಭಾಗ್ಯವೇ ಇಲ್ಲ. ಪದ್ಯದ ಸಾಲುಗಳನ್ನು SHUFFLE ಮಾಡಿ ಕೇಳುವವರು ಕೆಲವರಾದರೆ, ಇನ್ನೂ ಕೆಲವರು ತಮ್ಮ ಇಷ್ಟದ ಹಾಡನಿಂದ ಪ್ರಾರಂಭಿಸುವವರು. ಕಿವಿಗೆ EARPHONE ಸಿಕ್ಕಿಸಿ ಕಿಟಕಿಗೆ ತಲೆಯೊರಗಿಸಿ ಅದೇ ನೇರದಿಂದ ದಾರಿ ನೋಡುತ್ತಾ, ಓರೆ ಕಣ್ಣಿನಿಂದ ಬಸ್ ಹತ್ತಿದವರನ್ನು ನೋಡುತ್ತಾ ಪ್ರಯಾಣ ಮುಂದುವರೆಯುತ್ತದೆ. ಕೆಲವೊಮ್ಮೆ ಸನ್ನಿವೇಷಕ್ಕೆ ತಕ್ಕ ಹಾಡು ಬರದಿದ್ದಾಗ, ಹಾಡು ಬದಲಿಸಿ ಮತ್ತೆ ಕಣ್ಣುಮುಚ್ಚಿ ಆಲಿಸುವುದು. ಬಿರು ಬಿಸಿಲಿನ ಬೇಸಿಗೆಯಲ್ಲಿ ಒಣಗಿಹೋದ ಪರಿಸರವನ್ನು ಆನಂದಿಸಲೊಲ್ಲದ ನಾವು, ಮಳೆ ಬಿದ್ದು ಹಚ್ಚಹಸುರಾದ ಅದೇ ದಾರಿಯನ್ನು ಆಲಂಗಿಸುತ್ತೇವೆ.

ಅದಕ್ಕಾಗಿಯೇ ನಾವು ಒಂದು ಊರು ಯಾ ದಾರಿಯ ಸೌಂದರ್ಯವನ್ನು ಅಳೆಯುವಾಗ ಬೇಸಿಗೆಯಲ್ಲಿ ಅಳೆಯದೆ, ಅದು ಮುಂಗಾರಿನ ಮಳೆಯಿಂದ ಶೃಂಗಾರಗೊ0ಡಮೇಲೆ ಅಳೆಯುವುದು ಉತ್ತಮ. ದೃಶ್ಯಗಳು ಚೆನ್ನಾಗಿದೆಯೆಂದು ಒಂದತ್ತು ಕೀಮಿ ದೂರವಾದರೂ ಪರವಾಗಿಲ್ಲವೆಂದು ಸುಂದರ ದಾರಿಯನ್ನು ಆರಿಸುತ್ತೇವೆ. ದೂರದ ಊರಿಗಿಂತ, ಸಾಗುವ ದಾರಿಯೂ ನಮ್ಮ ಪಯಣದ ಉತ್ಸಾಹವನ್ನು ಹೆಚ್ಚಿಸುತ್ತದೆ. ಮಳೆಗೆ, ದಾರಿಯ ಮಧ್ಯೆ ತಿರುವುಗಳಲ್ಲಿ ಸಿಗುವ ಚಹಾ ಅಂಗಡಿಯಿಂದ ಹೊರಡುವ ಹೊಗೆಯ ದೃಶ್ಯ ಮತ್ತು ಘಮ, ಬೇಸಿಗೆಯಲ್ಲಿ ಧೂಳಿನೊಂದಿಗೆ ಸೇರಿ ಮೂಲೆಗುಂಪಾಗಿರುತ್ತದೆ. ಶಾಲಾಮಕ್ಕಳು ರಸ್ತೆಯ ಹೊಂಡದಲ್ಲಿ ತುಂಬಿರುವ ಕೆಸರನ್ನು ಯಾವಾಗ BUSಬಂದು ಎರಚಿಸುತ್ತದೆ ಎಂದು ಕಾಯುತ್ತಿರುತ್ತಾರೆ. ಖಾಸಗಿ ಪ್ರಯಾಣದಲ್ಲಿ ಸಣ್ಣ ತೊರೆಯೊಂದನ್ನು ಕಂಡೊಡನೆ ಮನಸ್ಸು ಗಾಡಿ ನಿಲ್ಲಿಸಲು ಹೇಳುತ್ತದೆ. ಗದ್ದೆಗಳ ನಡುವಿನ ದಾರಿಯಲ್ಲಿ ಸಂಚರಿಸುವಾಗ ಗಾಳಿಗೆ ಬತ್ತದ ತೆನೆಗಳು ಒಗ್ಗಟ್ಟಿನಿಂದ ಬಗ್ಗುವ ದೃಶ್ಯ. ಹಡೀಲು ಬಿದ್ದ ಗದ್ದೆಗಳಲ್ಲಿ ಮೇಯುವ ದನಗಳ ಹಿಂಡು. ಬಾಲ್ಯದಲ್ಲಿ BUSನ SEAT ಮೇಲೆ ನಿಂತು ಹಿಂದೆ ಓಡುವ ಮರಗಳನ್ನು ನೋಡುತ್ತಿದ್ದ ನೆನಪು. ನಿದ್ರಿಸಿದ್ದರೆ, ಸೇತುವೆ ಬಂದೊಡನೆ ಎಚ್ಚರಿಸಿ ನದಿ ತೋರಿಸುವ ಹಿರಿಯರು, ದೇವಸ್ಥಾನಗಳ ದ್ವಾರಗಳನ್ನು ಕಂಡೊಡನೆ ನಮಸ್ಕರಿಸುತ್ತಿದ್ದರು.  

            ಹೊಸ ದಾರಿಯಲ್ಲಿ ಪ್ರಯಾಣಿಸುವಾಗ ಈ ಹಿಂದೆ ನೋಡದ ದಾರಿಯ ಬದಿಯ ದೃಶ್ಯಗಳನ್ನು ನೋಡುವುದನ್ನು ಬಿಟ್ಟು, ಕೇಳಿದ ಹಾಡನ್ನು ಕೇಳಲು ಹೊರಟರೆ ನಾವು ಹೊಸ ದೃಶ್ಯಗಳನ್ನು ಕಳೆದುಕೊಳ್ಳುತ್ತೇವೆ. ಇಂದು ಜನ ಮರೆಯಲಾರದ ಕ್ಷಣಗಳನ್ನು VIDEOಮಾಡಲು ಹೋಗಿ, ಅದೇ ಅಮೂಲ್ಯ ಕ್ಷಣಗಳನ್ನು ಕಣ್ಣಾರೆ ಕಾಣುವುದನ್ನು ಕಳೆದುಕೊಳ್ಳುತ್ತಿದ್ದಾರೆ.  ದೇಶದಾದ್ಯಂತ ನಿರ್ಮಿಸಲಾಗುತ್ತಿರುವ EXPRESS WAY ಅಥವಾ HIGH WAYಗಳು. ಪ್ರಯಾಣದ ಸಮಯನ್ನು ಕಡಿತಗೊಳಿಸುವ ವಿಚಾರವನ್ನು ಹೊಂದಿದ್ದರೂ ಪ್ರಯಾಣಿಕರನ್ನು ಅಥವಾ ಯಾತ್ರಾರ್ತಿಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ತಾವು ತೆರಳಲಿರುವ ಊರಿಗೆ ಮುಟ್ಟಿಸಬಲ್ಲದೇ ವಿನಹ ಪ್ರಯಾಣದ ಸವಿಯನ್ನು ನೀಡದು. ಹೆದ್ದಾರಿಗಳ ಮೇಲ್ಸೇತುವೆಗಳು ಗ್ರಾಮೀಣ ಪ್ರವಾಸೋದ್ಯಮದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ನಾವು ಊಹಿಸಬೇಕಿದೆ. ಮಾಣಿ-ಬಂಟ್ವಾಳದ ನಡುವೆ ಬರುವ ಮೆಲ್ಕಾರ್ ನಂತೆ ಕೆಲವು ಪಟ್ಟಣಗಳು ಇಬ್ಬಾಗವಾಗಿವೆ. ಇದು ವ್ಯಾಪಾರಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿನ ವ್ಯಾಪಾರಿಗಳು ಪ್ರತಿಭಟಿಸಿ ವಿಫಲ ಪ್ರಯತ್ನವನ್ನೂ ನಡೆಸಿದ್ದರು. ಯಾತ್ರಾರ್ತಿಗಳನ್ನು ನಂಬಿ ನಡೆಯುತ್ತಿದ್ದ ರಸ್ತೆ ಬದಿಯ ಉದ್ಯಮಗಳು ಇನ್ನಿಲ್ಲದಂತಾಗಿವೆ. ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಾದ ಬಳಿಕ ಅಲ್ಲಿನ HOTEL ಮಾಲೀಕರು ಈ ಅಳಲನ್ನು ತೋಡಿಕೊಂಡಿದ್ದರು.

        ಮಂಗಳೂರಿನಿAದ ಮೂಡಬಿದರೆಗೆ ಸಂಪರ್ಕಿಸುವ ರಸ್ತೆ ಇಕ್ಕಟ್ಟಾಗಿದ್ದರೂ. ಗದ್ದೆ ಸಾಲುಗಳನ್ನು ಮತ್ತು ಅವುಗಳ ಮುಂದಿರುವ ಸುಂದರ ಮನೆಗಳನ್ನು ನಾವು ಕಣ್ಣುತುಂಬಿಕೊಳ್ಳಬಹುದಿತ್ತು. ಆದರೆ ಮಂಗಳೂರು-ಸೋಲ್ಹಾಪುರ ಹೆದ್ದಾರಿಯು ಇದೇ ದಾರಿಯಲ್ಲಿ ಹಾದು ಹೋಗುವುದರಿಂದ ಇನ್ನು ಮುಂದೆ ಈ ದೃಶ್ಯಗಳೆನ್ನವೂ ಗಲಕಾಲಕ್ಕೆ ತಳ್ಳಲ್ಪಡಲಿವೆ. ಯಾವುದೇ ಒಂದು ಊರಿನಲ್ಲಿ ಹೆದ್ದಾರಿ ಹಾದು ಹೋದೊಡನೆ ಅಲ್ಲಿನ ಜಾಗದ ಬೆಲೆ ದ್ವಿಗುಣಗೊಳ್ಳುತ್ತದೆ. ನಂತರ ಈ ಸನ್ನಿವೇಷ, ಅಲ್ಲಿನ ನಾಗರಿಕರು ಸುಂದರ ಕೃಷಿ ಜಾಗಗಳನ್ನು ಮಾರಿ ವಾಣಿಜ್ಯ ಸಂಕೀರ್ಣಗಳು ತಲೆಎತ್ತುವಂತೆ ಪ್ರೇರೇಪಿಸುತ್ತದೆ. ಇದು ಕೇವಲ ಭೌಗೋಳಿಕ ಬದಲಾವಣೆಯನ್ನಲ್ಲದೆ, ಅಲ್ಲಿನ ಜನರ ಸಂಸ್ಕೃತಿ, ಆಚಾರ-ವಿಚಾರಗಳನ್ನೂ ಬದಲಿಸುವುದು ಖೇದಕರ. "ಉಡು ಪೊಗ್ಗ್ ಲೆಕ!" ಎಂಬ ತುಳುವಿನ ಜಾನಪದ ಮಾತಿನಂತೆ ಹೆದ್ದಾರಿ ಹಾದು ಊರುಗಳ ಸೊಬಗು ನಾಶವಾಗುವುದರಲ್ಲಿ ಯಾವ ಸಂಶಯವೇ ಬೇಡ. ಇತ್ತೀಚೆಗೆ ಮಂಗಳೂರು-ಕಟೀಲ್ ರಸ್ತೆಯಲ್ಲಿ ಗುರುಪುರ ನದಿಗೆ ಅಡ್ಡಲಾಗಿ, ಏಕಮುಕಸಂಚಾರದ ಹೆಚ್ಚುವರಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಬದಿಯ ತಡೆಯು ಸಾಮಾನ್ಯ ತಡೆಗೋಡೆಗಳಿಗಿಂತ ಎತ್ತರವಾಗಿ,ದ್ವಿಚಕ್ರ ಯಾ ಸಣ್ಣ ವಾಹನದಲ್ಲಿ ಸಂಚರಿಸುವವರಿಗೆ ನದಿಯ ದೃಶ್ಯವನ್ನು ಮರೆಮಾಚುತ್ತದೆ. ಸಂಚರಿಸುವ ವೇಗದಲ್ಲಿ, ಚಾಲಕ ನದಿಯ ಸೌಂದರ್ಯ ನೋಡಿ ನಿಯಂತ್ರಣ ಕಳೆದುಕೊಳ್ಳದಿರಲಿ ಎಂದಿರಬಹುದು ಎಂದು ಅಂದುಕೊ0ಡರೆ, ಇತರರಿಗೆ ಯಾಕೆ ಆ ಶಿಕ್ಷೆ!?

                ದಶಕಗಳ ಹಿಂದೆ ಬಂಟ್ವಾಳ-ಮಂಗಳೂರು ಅಥವಾ ಮಂಗಳೂರು-ಉಡುಪಿ  ಹೆದ್ದಾರಿಯ ನವೀಕರಣ ಕೆಲಸಕ್ಕೆ ಮುಂಚೆ ರಸ್ತೆಯ ಎರಡೂ ಬದಿಯ ಹಳ್ಳಗಳಲ್ಲಿ ತಾವರೆಗಳನ್ನು ನೀವು ನೋಡಿರಬಹುದು. ಈ ಹಳ್ಳಗಳನ್ನೇ "ಜೌಗು ಪ್ರದೇಶ" ಅಥವಾ WETLAND ಎನ್ನುತ್ತಾರೆ. ಇವುಗಳು ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿ ಕಾಣಸಿಗುತ್ತವೆ. ಅತಿವೃಷ್ಟಿಯಾದಲ್ಲಿ ಹೆಚ್ಚುವರಿ ನೀರು ನದಿಯ ಮಟ್ಟವನ್ನು ಹೆಚ್ಚಿಸದೆ ಇವುಗಳನ್ನು ಸೇರುತ್ತದೆ. ಇಂದು ತಾವರೆಯೂ ಇಲ್ಲ, ಹಳ್ಳಗಳೂ ಇಲ್ಲ. ಒಂದೆರಡು ಕಡೆ ಮಾತ್ರವೇ ನಿಂತ ಚರಂಡಿ ಮಿಶ್ರಿತ  ನೀರು ಕಾಣಸಿಗುತ್ತದೆ. ಬಹುಶಃ ಇವು ಉಳಿಸಿದವುಗಳಲ್ಲ! ಮುಚ್ಚಲು ಮಣ್ಣಿಲ್ಲದೆ ಬಾಕಿಯಾಗಿದ್ದಿರಬಹುದು. ಕಳೆದ ವರುಷದ ಮಳೆಗೆ ಇದರ ಪ್ರಭಾವ, ನೇತ್ರಾವತಿಯ ನೀರು ಬಂಟವಾಳದ ಬಂಟರ ಭವನದ ಸಮುಚ್ಚಯದ ಕೆಳಮಾಳಿಗೆಯನ್ನು ಪ್ರವೇಷಿಸುವ ಮೂಲಕ ಪ್ರಬುದ್ಧರಿಗೆ ತೋರಿಸಿಕೊಟ್ಟಿದೆ. ಇತ್ತೀಚಿನ ವರುಷಗಳಲ್ಲಿ CHENNAIನಲ್ಲಿ ಸಂಭವಿಸುತ್ತಿರುವ ಪ್ರವಾಹಗಳಿಗೆ ಇವುಗಳ ಕಬಳಿಕೆಯೇ ಕಾರಣ ಎಂದು ಅನೇಕ ಬರಹಗಳು ವರದಿಮಾಡಿವೆ.

 



Comments

Popular posts from this blog

Monsoon Treasure

Those Days of Birth Days

OPEN HEART